Banner Ad

ಸುದ್ದಿ ಕನ್ನಡ ವಾರ್ತೆ

ಸಾಧು ವೇಷ ಧರಿಸಿ  ಗೋವಾ ಕರ್ನಾಟಕ ಗಡಿಯಲ್ಲಿ ಕುಳೆ ಬಳಿಯಿಂದ ನಾಪತ್ತೆಯಾಗಲು ಸಂಚು ರೂಪಿಸಿದ್ದ
ಗೋವಾ ಪರ್ವರಿಯ ಮೆಜೆಸ್ಟಿಕ್ ಹೋಟೆಲ್ ಬಳಿ ನಡೆದ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಗೋಪಾಲ್ ನಾಯಕ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ. ಈತನ ಜೊತೆಗಿದ್ದ ಸುಶಾಂತ್ ಹರಿಜನ ಹಾಗೂ ರಾಮದಾಸ್ ನಿರಾಶಿ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Banner Ad

ಗುಂಡಿನ ದಾಳಿ ಪ್ರಕರಣದ ಬಳಿಕ ಗೋಪಾಲ್ ನಾಯಕ್ ಸ್ವಲ್ಪ ಸಮಯದಿಂದ ತಲೆ ಮಾಡಿಸಿಕೊಂಡಿದ್ದ. ಈ ಸಂದರ್ಭದಲ್ಲಿ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರು ಹೈದರಾಬಾದ್ ಕಲ್ಕತ್ತಾ ಮತ್ತು ಜಗನ್ನಾಥ್ ಪುರಿ ಅಂತಹ ವಿವಿಧ ನಗರಗಳಲ್ಲಿ ಆಶ್ರಯ ಪಡೆದಿದ್ದ ಎನ್ನಲಾಗಿದೆ. ಸಂಗೀತ ಆರೋಪಿ ಮತ್ತೆ ಗೋವಾ ಪ್ರವೇಶಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಬಲೆ ಬೀಸಿದ್ದರು. ಗೋವಾ ಪೊಲೀಸರು ಗೋವಾದ ವಿವಿಧ ಪೊಲೀಸ್ ಠಾಣೆಗಳು ಮತ್ತು ಚೆಕ್ ಪೋಸ್ಟ್ ಗಳಲ್ಲಿ ಅಧಿಕ ತಪಾಸಣೆ ಕೈಗೊಳ್ಳಲಾಗುತ್ತಿತ್ತು. ಬುಧವಾರ ರಾತ್ರಿ 10:30ರ ಸುಮಾರು ಗೋವ ಕರ್ನಾಟಕ ಗಡಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಕಾರ್ಯಾಚರಣೆ ಸಂದರ್ಭದಲ್ಲಿ ಗೋಪಾಲ್ ನಾಯಕ್ ಈತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುಶಾಂತ್ ಹರಿಜನ ಹಾಗೂ ರಾಮದಾಸ್ ನಿರಾಶಿ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಒಬ್ಬ ಟ್ಯಾಕ್ಸಿ ಚಾಲಕನಾಗಿದ್ದು ಇನ್ನೊಬ್ಬ ಆರೋಪಿಯ ಪರಿಚಿತ ಎನ್ನಲಾಗಿದೆ. ಆರೋಪಿಯು ತಪ್ಪಿಸಿಕೊಳ್ಳಲು ಸಹಾಯ ಮಾಡುವಲ್ಲಿ ಇವರಿಬ್ಬರ ಪಾತ್ರ ಏನೆಂದು ಪೊಲೀಸರು ವಿವರವಾದ ತನಿಖೆ ನಡೆಸುತ್ತಿದ್ದಾರೆ.

ಕಳೆದ ತಿಂಗಳು ಕಾಸಿನೋ ಮೆಜೆಸ್ಟಿಕ್ ನಿರ್ದೇಶಕ ಶ್ರೀನಿವಾಸ್ ನಾಯಕ್ ರವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಬಂದಿತ ವ್ಯಕ್ತಿ  ಪ್ರಮುಖ ಆರೋಪಿ ಎನ್ನಲಾಗಿದೆ. ಈ ದಾಳಿ ಸಮಯದಲ್ಲಿ ಶ್ರೀನಿವಾಸ್ ನಾಯಕ್ ಯಾವುದೇ ಗುಂಡು ತಗುಲದೆ ಅದೃಷ್ಟವಶಾತ್ ಪಾರಾಗಿದ್ದರು.

ಯಲ್ಲಾಪುರದ ಮೂಲ…..

ಗೋವಾದ ಮೆಜೆಸ್ಟಿಕ್ ಹೋಟೆಲ್ ಕ್ಯಾಸಿನೋ ಫ್ರೈಡ್ ನಿರ್ದೇಶಕ ಶ್ರೀನಿವಾಸ್ ನಾಯಕ್ ರವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಾಲು ನಾಯಕ್ ರವರ ಸಹೋದರರಾಗಿದ್ದಾರೆ.

ಕನ್ನಡಿಗರಾದ ಶ್ರೀನಿವಾಸ್ ನಾಯಕ್ ರವರ ಮೇಲೆ ಗುಂಡಿನ ದಾಳಿ ನಡೆಸಲು ಕಾರಣವೇನು…? ಎಂಬುದು ಮಾತ್ರ ಇಂದಿಗೂ ನಿಗೂಢವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಗೋವಾ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ  ಈ ಪ್ರಕರಣದ ನಂಟಿನ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Banner Ad