Banner Ad

ಸುದ್ದಿ ಕನ್ನಡ ವಾರ್ತೆ

ಪಣಜಿ: ಜಗತ್ಪ್ರಸಿದ್ಧ ದೂದ ಸಾಗರ ಜಲಪಾತ ಪ್ರವಾಸೋದ್ಯಮ ಭಾನುವಾರ ಅಕ್ಟೋಬರ್ 4 ರಿಂದ ಆರಂಭಗೊಂಡಿದೆ. ಈ ಮೂಲಕ ಜಗತ್ತಿನಲ್ಲೇಡೆಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

Banner Ad

ಭಾರಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಮಳೆಗಾಲದ ಸಂದರ್ಭದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಅಕ್ಟೋಬರ್ ಒಂದರಿಂದ ಗೋವಾ ರಾಜ್ಯ ಪ್ರವಾಸೋದ್ಯಮ ಸೀಜನ್ ಆರಂಭಗೊಂಡಿದ್ದು ಈ ಹಿನ್ನೆಲೆಯಲ್ಲಿ ದೂದ ಸಾಗರ ಜಲಪಾತ ಪ್ರವಾಸೋದ್ಯಮವು ಇದೀಗ ಆರಂಭಗೊಂಡಿದೆ.

ಭಾರಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಹಾಲಿನೊರೆಯಂತೆ ಕಂಗೊಳಿಸುತ್ತದೆ. ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಕಡ್ಡಾಯವಾಗಿ ಈ ಜಲಪಾತ ವೀಕ್ಷಣೆಗೆ  ತೆರಳುತ್ತಾರೆ.

 

ಈ ಜಲಪಾತ ವೀಕ್ಷಣೆಗೆ ಗೋವಾದಿಂದ ಕುಳೆ ಮಾರ್ಗವಾಗಿ ತೆರಳಿ ಅಲ್ಲಿ ಶೇರಿಂಗ್ ಜೀಪ್ ಮೂಲಕ ಜಲಪಾತದ ಬಳಿ ತಲುಪಬಹುದಾಗಿದೆ.  ಈ ಜಲಪಾತದ ನೀರಿಗೆ ಇಳಿಯುವುದು ಅಪಾಯಕಾರಿಯಾಗಿದೆ.  ಇದರಿಂದಾಗಿ ಎಚ್ಚರಿಕೆಯಿಂದ ತೆರಳುವುದು ಅಗತ್ಯ.

 

ಒಟ್ಟಾರೆ ಈ ಜಲಪಾತ ವೀಕ್ಷಣೆಗೆ ಇದೀಗ ಚಾಲನೆ ದೊರೆತಿರುವುದು ಪ್ರವಾಸಿಗಳಲ್ಲಿ ಸಂತಸ ತಂದಿದೆ.

Banner Ad