ಸುದ್ದಿ ಕನ್ನಡ ವಾರ್ತೆ
ಗೋವಾ:ರಾಜ್ಯದ (ಬಿಚೋಲಿಂ) ಮೂಲದ ಪೂಜಾ ವಯಂಗಣಕರ್ ಅವರು ಕದಂಬ ಸಾರಿಗೆ ನಿಗಮದ (KTC) ಮೊದಲ ಮಹಿಳಾ ಚಾಲಕಿಯಾಗಿ ಆಯ್ಕೆಯಾಗಿದ್ದಾರೆ.
ಕದಂಬ ಸಾರಿಗೆ ನಿಗಮಕ್ಕೆ ಒಟ್ಟು 100ಕ್ಕೂ ಹೆಚ್ಚು ಚಾಲಕರ ಆಯ್ಕೆ ನಡೆದಿದ್ದು, ಅವರಲ್ಲಿ ಪೂಜಾ ಕೂಡ ಸ್ಥಾನ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ಬೆಳಗಾವಿಯಿಂದ ಸರಕು ಸಾಗಿಸುವ ಟ್ರಕ್ಗಳನ್ನು ಚಲಾಯಿಸುತ್ತಿರುವ ಪೂಜಾ, ಇದೀಗ ಕದಂಬ ಸಾರಿಗೆ ಸಂಸ್ಥೆಯಲ್ಲಿ ಚಾಲಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.
ಪ್ರಸ್ತುತ KTCಯಲ್ಲಿ 50 ಮಹಿಳಾ ನಿರ್ವಾಹಕರು ಹಾಗೂ 10 ಮಹಿಳಾ ಟಿಕೆಟ್ ಕಲೆಕ್ಟರ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಪೂಜಾ ಅವರ ಸೇರ್ಪಡೆಯೊಂದಿಗೆ ಮಹಿಳಾ ಚಾಲಕರಿಗೂ KTC ಯಲ್ಲಿ ಅವಕಾಶ ದೊರೆತಂತಾಗಿದೆ.
