ಸುದ್ಧಿಕನ್ನಡ ವಾರ್ತೆ
ಪಣಜಿ: ವಿದ್ಯೆ ನೀಡುವ ದೇಗುಲದಲ್ಲಿ ಕುಡಿದು ದಾಂದಲೆ ನಡೆಸಿ ಪೀಠೋಪಕರಣಗಳನ್ನು ದ್ವಂಸ ಮಾಡಿದ ಘಟನೆ ಗೋವಾದ ಪೆಡ್ನೆ ತಾಲೂಕಿನ ಕಾಸರವರ್ಣಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಗಳು ಭಾನುವಾರ ರಾತ್ರಿ ಶಾಲಾ ಕೊಠಡಿಯ ಕಿಡಕಿ ಮುರಿದು ಶಾಲೆಯ ಒಳಗೆ ಪ್ರವೇಶಿಸಿ ಶಾಲಾ ಕೊಠಡಿಯಲ್ಲಿ ಮಧ್ಯ ಸೇವಿಸಿ ಪಾರ್ಟಿ ಮಾಡಿ ಕುಡಿದ ಬಾಟಲಿಗಳನ್ನು ಒಡೆದು ದಾಂದಲೆ ನಡೆಸಿದ್ದಾರೆ. ಈ ಘಟನೆಯು ಸ್ಥಳೀಯ ಗ್ರಾಮಸ್ಥರು ಮತ್ತು ಪೆÇೀಷಕರಲ್ಲಿ ಆಕ್ರೋಶವನ್ನು ಉಂಟು ಮಾಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಶಾಲಾ ಸಿಬ್ಬಂದಿಗಳು ಇಂದಿನಂತೆ ಸೋಮವಾರ ಬೆಳಿಗ್ಗೆ ಶಾಲೆಗೆ ಬಂದಾಗ ಶಾಲಾ ಕೊಠಡಿಗಳ ಒಳಗೆ ಕಿಡಕಿಗಳು ಒಡೆದಿರುವುದು ಕಂಡುಬಂದಿದೆ. ಭಾನುವಾರ ರಾತ್ರಿ ಅಪರಿಚಿತರು ಶಾಲಾ ಆವರಣದಲ್ಲಿ ಮಧ್ಯ ಸೇವಿಸಿ ದಾಂದಲೆ ನಡೆಸಿರುವುದು ಕಂಡುಬಂದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಮೋಪ ಪೆÇಲೀಸ್ ಠಾಣೆಯ ತಂಡ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದರು. ಪೆÇಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಲ ಆಭರಣದಲ್ಲಿ ಇಂತಹ ಕೃತ್ಯವನ್ನು ಯಶಗಿರುವ ಅಪರಾಧಿಗಳನ್ನು ಆದಷ್ಟು ಬೇಗ ಬಂದಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ
