ಸುದ್ಧಿಕನ್ನಡ ವಾರ್ತೆ
ಪಣಜಿ: ಗಣೇಶ ವಿಸರ್ಜನೆಯ ವೇಳೆ ಹರಾಜಿನಲ್ಲಿ ಸಾವಿರಾರು ರೂಪಾಯಿಗೆ ಹಣ್ಣು ಹಂಪಲನ್ನು ಭಕ್ತರು ಪಡೆದುಕೊಳ್ಳುವುನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಭಕ್ತರು ಗಣೇಶನ ಪಾದದ ಬಳಿಯ ತೆಂಗಿನ ಕಾಯಿಯನ್ನು ಬರೋಬ್ಬರಿ 7 ಲಕ್ಷ ರೂ ಗೆ ಪಡೆದುಕೊಂಡಿದ್ದಾರೆ. ಇದು ನಡೆದಿರುವುದು ಗೋವಾದಲ್ಲಿ.
ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಫಲಾವಳಿಯ ಹರಾಜು ವಿಶೇಷವಾಗಿರುತ್ತದೆ. ಅದರಲ್ಲಿಯೂ ಗಣೇಶನ ಪಾದದ ಬಳಿ ಇರುವ ತೆಂಗಿನ ಕಾಯಿಗೆ ಇನ್ನೂ ಹೆಚ್ಚಿನ ಮಹತ್ವ ಇರುತ್ತದೆ. ಇದನ್ನು ಹಚ್ಚಿನ ಬೆಲೆ ಹರಾಜು ಕೂಗಿ ಖರಿದಿಸುವವರಿದ್ದಾರೆ. ಗೋವಾದಲ್ಲಿ ಫಲಾವಳಿಯ ಹರಾಜಿನಲ್ಲಿ ಗಣೇಶನ ಪಾದದ ಬಳಿ ಇರುವ ಒಂದೇ ಒಂದು ತೆಂಗಿನ ಕಾಯಿ 7 ಲಕ್ಷ ರೂ ಬೆಲೆಗೆ ಹರಾಜಿನಲ್ಲಿ ಖರೀದಿಸಿದ್ದಾರೆ. ಈ ವೀಡಿಯೊ ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಸದ್ದುಮಾಡುತ್ತಿದೆ.
ಗೋವಾದ ಗೋವಾದ ಹಳದೋಣದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ 11 ದಿನದ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಫಲಾವಳಿಯ ಹರಾಜು ಪ್ರಕ್ರಿಯೆ ನಡೆದಿದೆ. ಕಳೆದ ವರ್ಷ ಗಣೇಶ ವಿಸರ್ಜನೆಯ ವೇಳೆ ಹರಾಜಿನಲ್ಲಿ ಗಣೇಶನ ಪಾದದ ಬಳಿಯಿದ್ದ ತೆಂಗಿನ ಕಾಯಿ 4 ಲಕ್ಷಕ್ಕೆ ಹರಾಜಾಗಿತ್ತು. ಆದರೆ ಪ್ರಸಕ್ತ ವರ್ಷ ಭಕ್ತರೊಬ್ಬರು ಆಶೀರ್ವಾದದ ರೂಪದ ಈ ಒಂದೇ ಒಂದು ತೆಂಗಿನ ಕಾಯಿಯನ್ನು ಬರೋಬ್ಬರಿ 7 ಲಕ್ಷ ರೂ ಗಳಿಗೆ ಪಡೆದುಕೊಂಡಿದ್ದಾರೆ.
ಈ ವೀಡಿಯೊ ಸದ್ಯ ಸಾಮಾಜಿಕ ಜಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
