ಸುದ್ದಿಕನ್ನಡ ವಾರ್ತೆ
ಪಣಜಿ: ಭಾರತೀಯ ಆಧುನಿಕ ಚಿತ್ರಕಲೆ ಜಗತ್ತಿನ ಪ್ರವರ್ಥಕ ಮತ್ತು ಗೋವಾದ ಸುಪುತ್ರ ಫ್ರಾನ್ಸಿಸ್ ನ್ಯೂಟನ್ ಸೋಜ ರವರ ಅಪರೂಪದ ಕೃತಿ ಅಂತರರಾಷ್ಟ್ರೀಯ ಕಲಾ ಮಾರುಕಟ್ಟೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
ಪ್ರತಿಷ್ಠಿತ ನ್ಯಾಪ್ರನ್ ಆಟ್ರ್ಸ್ ಸಂಸ್ಥೆ ಆಯೋಜಿಸಿದ್ದ ಶರತ್ಕಾಲ್ ಹರಾಜಿನಲ್ಲಿ ಸೌಜ ರವರ 1965ರ ಚಿತ್ರಕಲೆ ಹನುಮಾನ್ ದಿ ಮಂಕಿ ಗಾಡ ನ್ನು ಹರಾಜಿನಲ್ಲಿ 15.60 ಕೋಟಿ ರೂ ಗಳಿಗೆ ಮಾರಾಟ ಮಾಡಲಾಗಿದೆ.
ಈ ಅಪರೂಪದ ವರ್ಣ ಚಿತ್ರವನ್ನು ಸೌಜರ್ ಅವರು ನಾತದ್ವಾರ ಸಂಪ್ರದಾಯದ ವರ್ಣ ಚಿತ್ರಕಾರ ಮೋಹನ್ ಶರ್ಮಾ ರವರ ಸಹಯೋಗದೊಂದಿಗೆ ರಚಿಸಿದ್ದಾರೆ. ಈ ವರ್ಣ ಚಿತ್ರದ ಅಂದಾಜು ಬೆಲೆ 1.5 ರಿಂದ 2.5 ಕೋಟಿ ರೂಗಳಷ್ಟು ಇತ್ತು. ಆದರೆ ಕಲಾ ಪ್ರೇಮಿಗಳು ಮತ್ತು ಸಂಗ್ರಹಕರಿಂದ ಬಂದ ಅಗಾಧ ಪ್ರತಿಕ್ರಿಯೆಯಿಂದಾಗಿ ಈ ಕಲಾಕೃತಿಯು 15.60 ಕೋಟಿ ರೂಗಳನ್ನು ತಲುಪಿತು ಎನ್ನಲಾಗಿದೆ.
ಪ್ರಗತಿಶೀಲ ಕಲಾವಿದರ ಗುಂಪಿನ ಭಾಗವಾಗಿರುವ ಸೌಜನ್ ರವರ ವರ್ಣ ಚಿತ್ರಗಳ ಯಶಸ್ಸು ಜಾಗತಿಕ ಕಲಾ ಮಾರುಕಟ್ಟೆಯಲ್ಲಿ ಭಾರತೀಯ ಕಲೆಯ ಸ್ಥಾನ ಮತ್ತು ಮೌಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಈ ಹರಾಜು ಭಾರತೀಯ ಕಲೆಗಳಲ್ಲಿ ಜಾಗತಿಕ ಕಲಾ ಪ್ರೇಮಿಗಳು ಮತ್ತು ಸಂಗ್ರಹಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.
