Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಡಗಾಂವನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಲ್ಷೇಪಾರ್ಹ ಪೋಸ್ಟರ್ ಅಂಟಿಸಿರುವ ಘಟನೆ ಬೆಳಕಿಗೆ ಬಂದಿದ್ದು ಮಡಗಾಂವ ಭಾಗದಲ್ಲಿ ಶುಕ್ರವಾರ ಕೋಲಾಹಲವೇ ಸೃಷ್ಠಿಯಾಗಿದೆ.

ಹೌದು ಗೋವಾದ ಮಡಗಾಂವನಲ್ಲಿ ದುಷ್ಕರ್ಮಿಕರು ಪ್ರಧಾನಿಗಳ ಬಗ್ಗೆ ಆಕ್ಷೇಪಾರ್ಹ ಸ್ಟಿಕ್ಕರ್ ಅಂಟಿಸಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಡಗಾಂವನ ಗೋಮಂತ ವಿದ್ಯಾನಿಕೇತನ ಕಟ್ಟಡದ ಮುಂಭಾಗದಲ್ಲಿರುವ ಪೆಟ್ರೋಲ್ ಬಂಕ್ ನ ಕಂಬದ ಮೇಲೆ ಅಂಟಿಸಲಾಗಿದ್ದ ಈ ಸ್ಟಿಕ್ಕರ್ ನಲ್ಲಿ “ಮೋದಿ ನೆ ಮರ್ವಾದಿಯಾ” ಎಂಬ ಸಂದೇಶ ಬರೆದಿದ್ದು ಅರದ ಕೆಳಗೆ ರೈಫಲ್ ಚಿನ್ಹೆಯನ್ನು ಮುದ್ರಿಸಲಾಗಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

Banner Ad

ಈ ಆಕ್ಷೇಪಾರ್ಹ ಸ್ಟಿಕ್ಕರ್ ಮಾಹಿತಿ ಲಭ್ಯವಾದ ಕೂಡಲೇ ಮಡಗಾಂವ ಪೋಲಿಸರ ತಂಡ , ಅಪರಾಧ ತನಿಖಾ ಇಲಾಖೆ (CID) ಮತ್ತು ಇತರ ಗುಪ್ತಚರ ಸಂಸ್ಥೆಗಳ ತಂಡಗಳು ಕಾನೂನು ಸುವ್ಯವಸ್ಥೆಯ ದೃಷ್ಠಿಯಿಂದ ಪರೀಸೀಲಿಸಿ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಕೊಂಡಿದ್ದಾರೆ.

ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಳಗಿನ ಜಾವ ಯಾರೋ ಅಪರಿಚಿತ ವ್ಯಕ್ತಿಗಳು ಈ ಸ್ಟಿಕ್ಕರ್ ಅಂಟಿಸಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಪೋಲಿಸರು ಇಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪೋಲಿಸರು ಪ್ರಕರಣ ದಾಲಿಸಿಕೊಂಡು ಈ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Banner Ad