Banner Ad

ಸುದ್ದಿಕನ್ನಡ ವಾರ್ತೆ

ಗೋವಾ: ಆರ್ಥಿಕವಾಗಿ ಹಿಂದುಳಿದು ಅದರಿಂದಾಗಿ ಉನ್ನತ ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯವಾಗದ ಹವ್ಯಕ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲದ ವ್ಯವಸ್ಥೆಯನ್ನು ಅಖಿಲ ಹವ್ಯಕ ಮಹಾಸಭೆಯು ಮಾಡಲಿ ಎಂದು ಖ್ಯಾತ ಜೀವವಿಜ್ಞಾನಿ ಡಾಕ್ಟರ್ ಜೈರಾಮ್ ಭಟ್ ಅವರು ಕರೆಯಿತ್ತರು.

Banner Ad

ಅವರು ಗೋವಾದ ಗಾವನಲ್ಲಿ ಶ್ರೀ ಹವ್ಯಕ ಮಹಾಸಭೆಯವರು ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇನ್ನೋರ್ವ ಅತಿಥಿ ಡಾ. ರಘುರಾಮಚಂದ್ರ ಭಟ್ ಅವರು ಮಕ್ಕಳು ಹವ್ಯಕ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು

ಶ್ರೀ ಹವ್ಯಕ ಮಹಾಸಭೆ ಬೆಂಗಳೂರು ಇವರು ವಿವಿಧ ವಯೋಮಾನದ ಮಕ್ಕಳಿಗೆ ಹಾಗೂ ಹಿರಿಯರಿಗೆ ನಾನಾ ವಿಧದ ಸ್ಪರ್ಧೆಗಳನ್ನು ಆಯೋಜಿಸಿದ್ದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹವ್ಯಕ ಮಹಾಸಭೇಯ ಅಧ್ಯಕ್ಷ ಶ್ರೀ ಡಾ. ಗಿರಿಧರ್ ಕಜೆ ಅವರು ವಹಿಸಿದ್ದರು.

ಆರಂಭದಲ್ಲಿ ಶ್ರೀ ಮಹಾಬಲ ಭಟ್ ಸ್ವಾಗತಿಸಿದರು ಶ್ರೀಮತಿ ವಿದ್ಯಾ ಹೆಗಡೆ ನಿರೂಪಿಸಿದರು ಶ್ರೀಮತಿ ಗಂಗೂಬಾಯಿ ಅವರು ವಂದನಾರ್ಪಣೆಗೈದರು.

ಪ್ರತಿಬಿಂಬ ಕಾರ್ಯಕ್ರಮದ ಕೇಂದ್ರ ಸಂಚಾಲಕ ಶ್ರೀ ದೀಪಕ ಹೆಗಡೆ ಗೋಳಿಕೈ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಗೋವಾ ಪ್ರಾಂತ ಸಂಚಾಲಕ ಶ್ರೀ ಸೀತಾರಾಮ ಭಟ್ಟ ಉಪಸ್ಥಿತರಿದ್ದರು.

Banner Ad