Banner Ad

ಸುದ್ದಿ ಕನ್ನಡ ವಾರ್ತೆ
ಗೋವಾ:ಮಹಿಳೆಯರು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಸುಸಂಸ್ಕೃತ ಕುಟುಂಬವನ್ನು ನಿರ್ಮಿಸುತ್ತಾರೆ ಎಂದು ಬೆಂಗಳೂರಿನ ಶ್ರೀ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾಕ್ಟರ್  ಗಿರಿಧರ್ ಖಜೆ ಅವರು ಅಭಿಪ್ರಾಯ ಪಟ್ಟರು.

ಅವರು ಗೋವಾದ ಮಡಗಾವ್ನಲ್ಲಿ  ಶ್ರೀಹವ್ಯಕ ಮಹಾಸಭೆಯ ಗೋವಾ ಪ್ರಾಂತ್ಯದ ಮಹಿಳಾ ವೇದಿಕೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

Banner Ad

 

ಹವ್ಯಕ ಮಹಾಸಭೆಯು ಹವ್ಯಕ ಮಹಿಳೆಯರ ಸಂಘಟನೆಗಾಗಿ 83 ಮಹಿಳಾ ವೇದಿಕೆಗಳನ್ನು ರಚಿಸುತ್ತಿರುವುದಾಗಿ ಅವರು ಹೇಳಿದರು ವಿದೇಶದಲ್ಲಿ ಎಂಟು, ಹೊರನಾಡಿನಲ್ಲಿ ಎಂಟು ಹಾಗೂ ಉಳಿದ ವೇದಿಕೆಗಳನ್ನು ಕರ್ನಾಟಕದಲ್ಲಿ ರಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಸ್ವಾಗತವನ್ನು ಶ್ರೀಮತಿ ವಿಜಯ ಹೆಗಡೆ ಅವರು ಮಾಡಿದರು ಶ್ರೀಮತಿ ಸುಲೋಚನಾ ಹೆಗಡೆ ಅವರು ಮುಖ್ಯ ಬ್ಯಾಗತರಾಗಿ ಆಗಮಿಸಿದ್ದರು.

ಗೋವಾ ಪ್ರಾಂತ್ಯ ಮಹಿಳಾ ವೇದಿಕೆಯ ನಿಯೋಜಿತ ಸಂಚಾಲಕಿ ಶ್ರೀಮತಿ ರೇಖಾ ಹೆಗಡೆ, ಮುಂಬೈ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಶಾಂತಾ ಭಟ್, ಶ್ರೀಮತಿ ಅನುರಾಧಾ ಕಜೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ರೇಖಾ ಹೆಗಡೆ ಅವರ ಸಂಚಾಲಕತ್ವದಲ್ಲಿ 18 ಮಹಿಳೆಯರ ಗೋವಾ ಪ್ರಾಂತ್ಯ ಮಹಿಳಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ.

ಗೋವಾ ಪ್ರಾಂತ್ಯದ ಹವ್ಯಕ ಮಹಿಳಾ ವೇದಿಕೆ ಸಮಿತಿ

ಸಂಚಾಲಕಿ : ರೇಖಾ ಹೆಗಡೆ ವರ್ನಕೇರಿ
ಸಹಸಂಚಾಲಕಿ : ವಿದ್ಯಾ ರಾಮಚಂದ್ರ ಹೆಗಡೆ ಹೆಗ್ನೂರು

ಮಾರ್ಗದರ್ಶಕರು :

ವಿಜಯಾ ಸದಾಶಿವ ಹೆಗಡೆ, ಹಲ್ಲುಸರಿಗೆ
ಮಮತಾ ಈಶ್ವರ ಹೆಗಡೆ ನೀಲಕೋಡ
ಗಾಯತ್ರಿ ಶ್ರೀಪಾದ ಭಟ್ಟ, ಹೊನ್ನೆಕೈ

ನಿರ್ದೇಶಕಿ : ಗಂಗೂಬಾಯಿ ವಿನಾಯಕ ಭಟ್, ಹಂದಿಗೋಣ
ಸಹ ನಿರ್ದೇಶಕಿ : ಸಿಂಧು ಮಹಾಬಲೇಶ್ವರ ಹೆಗಡೆ, ಜಾಜಿಗುಡ್ಡೆ

ಸಂಯೋಜಕಿ : ಶರ್ವಾಣಿ ಮಹಾಬಲ ಭಟ್ಟ ಉಪ್ಪಿನ ಪಟ್ಟಣ

ಸಹ ಸಂಯೋಜಕರು :

ಧನ್ಯಾ ಹರಿಕೃಷ್ಣ ಭಟ್ಟ ನೀರ್ಮೂಲೆ
ಸುಚೇತಾ ಪರಮೇಶ್ವರ ಭಟ್ಟ, ಮಾಡಗೇರಿ
ವೀಣಾ ಶಶಿಕಾಂತ್ ಜೋಶಿ, ಅಗರವಾಡ
ಸುಮಾ ಶ್ರೀನಿವಾಸ ಭಟ್, ಅಡಿಕೇಸರ
ಮಾಲಿನಿ ರಾವ್ , ಸಾಗರ
ಲತಾ ಸಾಂಬಶಿವ ಭಟ್, ಶಂಕರಗದ್ದೆ
ಕೀರ್ತಿ ಶ್ರೀಧರ್ ಭಟ್, ಎಲ್ ಗುಡ್ಡೆಕೊಪ್ಪ
ವಸುಧಾ ಚಿದಂಬರ ಹೆಗಡೆ, ಜಾಗನಳ್ಳಿ
ಮಹಾಲಕ್ಷ್ಮಿ ವಿಶ್ವನಾಥ ಭಟ್ಟ, ತೆರೆಗಾಳಿ
ವಿದ್ಯಾ ವಿನಾಯಕ ಗಾಂವ್ಕರ ಬಳಗಾರ

Banner Ad