Banner Ad

ಸುದ್ಧಿಕನ್ನಡ ವಾರ್ತೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದವರ ಸಹಯೋಗದಲ್ಲಿ ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದ ಸಭಾಂಗಣದಲ್ಲಿ ಜ.1ರಂದು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಸ್ಥಳೀಯ ವಿಜಯ ಮಠದ ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪನೆ, ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶ್ರೀಕಾಳಿಕಾದೇವಿ ಸ್ವಾಮಿಲ್ ವತಿಯಿಂದ ಉಪಹಾರ ನೆರವೇರಿದ ನಂತರ ಶ್ರೀಕಾಳಿಕಾ ಜುವೇಲರ್ಸ್ ಅವರ ವತಿಯಿಂದÀ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸವಿ ಪ್ರಸಾದ ವಿತರಿಸಲಾಸಲಾಯಿತು.

Banner Ad

ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ, ಲಕ್ಷ್ಮಣ ಸೋಮಗೌಡ್ರ, ರಾಜು ಪತ್ತಾರ, ಬಸವರಾಜ ಪಣದಿ, ಸುರೇಶ ಬಡಿಗೇರ, ಬಸವರಾಜ ಬಡಿಗೇರ, ಉಮೇಶ ಬಡಿಗೇರ, ಈರಣ್ಣ ಬಳಿಗಾರ, ಗುಳಪ್ಪ ಪಣದಿ, ಈಶ್ವರ ಬಡಿಗೇರ, ಸಂತೋಷ ಬಡಿಗೇರ, ಭೀಮಶಿ ಬಡಿಗೇರ, ಮಂಜು ಪತ್ತಾರ, ಮಹಾಂತೇಶ ಬಡಿಗೇರ, ಸ್ಥಳೀಯ ರಾಜಕೀಯ ಮುಖಂಡರು, ಗಣ್ಯರು, ವಿಶ್ವಕರ್ಮ ಸಮಾಜದ ಹಿರಿಯ ನಾಗರಿಕರು, ಸ್ಥಳೀಯ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಯುವಕರು, ಸ್ಥಳೀಯರು ಇದ್ದರು.

Banner Ad