ಸುದ್ದಿ ಕನ್ನಡ ವಾರ್ತೆ

ಕಾರವಾರ:ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಹಾಗೂ ನಗರ ಮಂಡಲ ವತಿಯಿಂದ ಬುಧವಾರ ದಿ. ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವನ್ನು ಪಕ್ಷದ ನೂತನ ಕಚೇರಿಯಲ್ಲಿ ಆಚರಣೆ ಮಾಡಲಾಯಿತು.

ಆರಂಭದಲ್ಲಿ ಭಾರತ ಮಾತೆಗೆ ಹಾಗೂ ಅಟಲ್ ಜೀ ಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪ್ರಾಸ್ತಾವಿಕ ಮಾತುಗಳನ್ನು ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರರವರು ಮಾತನಾಡಿ ಅಟಲ್ ಜೀಯವರ ಜೀವನ, ಅವರ ಸಾಧನೆಗಳನ್ನು ತಿಳಿಸಿದರು.
ಜಿಲ್ಲಾ ವಿಶೇಷ ಆಹ್ವಾನಿತರಾದ ಮನೋಜ್ ಭಟ್ ಮಾತನಾಡಿ ಅಟಲ್ ಜೀ ಯವರು ಓರ್ವ ಕವಿಗಳು, ವಾಗ್ಮಿಗಳು, ರಾಜಕೀಯದಲ್ಲಿ ಅವರ ಸಾಧನೆ ವಿಶೇಷವಾದದ್ದು ಎಂದರು.

ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಮಾಲಾ ಹುಲಸ್ವಾರ ರವರು ಮಾತನಾಡಿ ಅಟಲ್ ಜೀ ಯವರು ಅಜಾತಶತ್ರು ಅಂತ ಪ್ರಖ್ಯಾತಿ ಪಡೆದವರು ಅವರನ್ನು ಎಷ್ಟು ನೆನೆದರು ಸಾಲದು ಎಂದರು.
ಜಿಲ್ಲಾ ಉಪಾಧ್ಯಕ್ಷರು ಸಂಜಯ ಸಾಳುಂಕೆ ಮಾತನಾಡಿ ಅಟಲ್ ಜೀ ಯವರು ಧರ್ಮ ಪ್ರತಿಪಾದಕರು, ವಾಗ್ಮಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನು ಮೂಡುಪಾಗಿ ಇಟ್ಟವರು ಎಂದರು.

ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ ಮಾತನಾಡಿ ಅಟಲ್ ಜೀ ಯವರು ತಂದ ಅನೇಕ ಯೋಜನೆಗಳು ಇಂದು ಕಾರ್ಯರೂಪಕ್ಕೆ ಬರ್ತಾ ಇವೆ.
ಅವರ ಸರಳತೆ,ಸಜ್ಜನತೆ ನಮಗೆ ಮಾರ್ಗದರ್ಶನವಾಗಬೇಕು ಎಂದರು.
ವೇದಿಕೆ ಮೇಲೆ ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ, ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳು ದೇವಿದಾಸ ಕಂತ್ರಿಕರ್, ಅಶೋಕ ಗೌಡ ಉಪಸ್ಥಿತರಿದ್ದರು. ದೇವಿದಾಸ ಕಂತ್ರಿಕರ ಸ್ವಾಗತಿಸಿದರು ಅಶೋಕ ಗೌಡ ವಂದಿಸಿದರು. ಪಕ್ಷದ ಅನ್ಯನ್ಯ ಜವಾಬ್ದಾರಿ ಇದ್ದ ಕಾರ್ಯಕರ್ತರು ಉಪಸ್ಥಿತರಿದ್ದರು.