ಸುದ್ದಿ ಕನ್ನಡ ವಾರ್ತೆ
ಅಶೋಕಾ ಹೂವುಗಳು ಎಲ್ಲರ ಗಮನ ಸೆಳೆಯುತ್ತ ಗಿಡದ ತುಂಬೆಲ್ಲ ಅರಳಿರುವ ಸೊಬಗು ಶೇವಾಳಿ ಕಾಡಿನಲ್ಲಿ ಕಾಣಬಹುದು ಹೂವಾದರೂ ಕಾಯಿ ಹಣ್ಣುಗಳು ಆಗದ ಅಶೋಕಾ ಹೂವುಗಳು ಗುಂದ ವನ್ಯ ಜೀವಿ ವಿಭಾಗದ ಶೇವಾಳಿ ಕಾಡಿನಲ್ಲಿ ಆಕರ್ಷಣೆ ಯಾಗಿದೆ.
ಪ್ರಾಣಿ ಪಕ್ಸಿ ಗಳು ಈ ಹೂವುಗಳ ಅಂದಕ್ಕೆ ಮಾರು ಹೋಗುತ್ತಿವೆ. ಜೋಯಿಡಾ ತಾಲೂಕಿನ ಕಾಡು ಜೀವಿಗಳ ವೈವಿದ್ಯದ ಜೊತೆಗೆ ಸಸ್ಯ ಸಂಜೀವಿನಿ ಯನ್ನೂ ಹೊಂದಿದೆ. ಇಲ್ಲಿರುವ ಸಸ್ಯ ಸಂಪತ್ತು ಜಗತ್ತಿನ ಬೇರೆಲ್ಲೂ ಕಾಣಸಿಗದು ಎಂದರೆ ತಪ್ಪಿಲ್ಲ ವೆನೋ ಅನ್ನುವಷ್ಟು ಸಂಬ್ರುದ್ಧ ಸಂಪತ್ತನ್ನು ಹೊಂದಿದೆ ಎನ್ನುವುದಕ್ಕೆ ಈ ಅಶೋಕ ಹೂವುಗಳು ಗಳೂ ಒಂದು,ಪ್ರಕೃತಿಯ ನಿಯಮವೇ ಹಾಗೆ ಯಾವ ಯಾವ ಕಾಲಕ್ಕೆ ಏನೇನು ಆಗಬೇಕೋ ಅವು ಆಗುತ್ತವೆ,
ಹೋಳಿ ಹುಣ್ಣಿಮೆ ಬರುತ್ತದೆ ಎನ್ನುವ ವಾರಗಳ ಮೊದಲೇ ಈ ಅಶೋಕ ಹೂವುಗಳು ಅರಳಿ ಆಕರ್ಷಣೆ ಯನ್ನು ಹುಟ್ಟು ಹಾಕುತ್ತಿವೆ. ಈ ಹೂವು ಗಳನ್ನು ನೋಡುತ್ತಿದ್ದಂತೆ ಓಹೋ ಮುಂದಿನ ಹುಣ್ಣಿಮೆ ಹೋಳಿ ಹುಣ್ಣಿಮೆ ಎಂಬ ನೆನಪನ್ನು ಪ್ರಕೃತಿ ಮಾಡಿ ಕೊಡುತ್ತಿದೆ. ಇಂತಹ ಹಲವಾರು ವಿಸ್ಮಯ ಗಳು ಪ್ರಕೃತಿ ಯಲ್ಲಿ ಕಂಡು ಬರುತ್ತಿರುವುದರಿಂದ ಹಿಂದಿನ ಜನರು ಹಬ್ಬ ಹುಣ್ಣಿಮೆ ಗಳು, ಬರುವ ದಿನವನ್ನು ನಿಖರ ವಾಗಿ ಹೇಳುತ್ತಿದ್ದರು,
ಸೂರ್ಯನ ನಡೆ ಯನ್ನು ಗಮನಿಸಿ ವೇಳೆ ಹೇಳುತ್ತಿದ್ದರು, ಅದೇನೇ ಇದ್ದರೂ ಈ ಹೂವುಗಳನ್ನು ನೋಡಲು ಶೇವಾಳಿ ಗ್ರಾಮದ ತುರಿಗುಡ್ಡೆ ರಸ್ತೆಯಲ್ಲಿ, ಯರಮುಖ ದಿಂದ ಹೋದರೆ ಶೇವಾಳಿ ಕಾಡಿನಲ್ಲಿ ಕಂಡು ಬರುತ್ತವೆ.
