ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಹಿನ್ನೆಲೆ ಯಲ್ಲಿ ಜೋಯಿಡಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷದ ಅಭ್ಯರ್ಥಿ ಗಳು ಟಿಕೆಟ್ ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲಿ ಬಿಜೆಪಿ ಪಕ್ಷದ ಟಿಕೆಟ್‌ಗಾಗಿ ನಗರಿಯ ಸಂದೀಪ ಗಾವಡಾ ಆಕಾಂಕ್ಷಿ ಆಗಿದ್ದಾರೆ.

ಹಿಂದುಳಿದ ಅ ವರ್ಗ ಬಂದಿರುವುದರಿಂದ ಅ ವರ್ಗದ ಸಂದೀಪ ಗಾವಡಾ ಜೋಯಿಡಾ ಜಿಲ್ಲಾ ಪಂಚಾಯತ್ ಕ್ಷೆತ್ರಕ್ಕೆ ಬಿಜೆಪಿ ಯಿಂದ ಸ್ಪರ್ದಿಸಲು ಮುಂದಾಗಿದ್ದಾರೆ.

ಜೋಯಿಡಾ ಭಾಗದಲ್ಲಿ ಶಕ್ತಿಕೇಂದ್ರದ ಪ್ರಮುಖ ಜವಾಬ್ದಾರಿ ಹೊಂದಿರುವ ಮತ್ತು ಪಕ್ಷದ ಎಲ್ಲ ಕಾರ್ಯಕ್ರಮ ಗಳಲ್ಲಿ ಜವಾಬ್ದಾರಿ ವಹಿಸುವ ನಗರಿಯ ಸಂದೀಪ ಗಾವಡಾ ಬಿಜೆಪಿ ಯಿಂದ ಜಿಲ್ಲಾ ಪಂಚಾಯತ್ ಕ್ಕೆ ಸ್ಪರ್ದಿಸಲಿ ಎಂದು ಅಭಿಮಾನಿ ಗಳು ಕೂಡ ಹೇಳುತ್ತಿರುವುದು ಅವರು ಸ್ಪರ್ದಿಸಲು ಯೋಚಿಸುವಂತೆ ಮಾಡಿದೆ ಹಾಗಾಗಿ ಪಕ್ಷದ ಟಿಕೆಟ್ ನಿರೀಕ್ಷೆ ಯಲ್ಲಿದ್ದಾರೆ.

ಜೋಯಿಡಾ ತಾಲೂಕಿನ ನಗರಿ ಗ್ರಾಮದ ಸಂದೀಪ ಪರಶುರಾಮ ಗಾವಡಾ ಅವರು ಬಿಜೆಪಿಯ ತಳಮಟ್ಟದ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಜೋಯಿಡಾ ಶಕ್ತಿಕೇಂದ್ರದ ಪ್ರಮುಖ ರಾಗಿ ಕೆಲಸ ಕಾರ್ಯನಿರ್ವಹಿಸುತ್ತಿರುವ ಅವರು, ಮಾಜಿ ಶಾಸಕ ಸುನೀಲ ಹೆಗಡೆ ಅವರ ಆಪ್ತ ವಲಯದಲ್ಲಿದ್ದಾರೆ ಎನ್ನಲಾಗಿದೆ.ಜೊತೆಗೆ ರಾಮಾನಂದಾಚಾರ್ಯ ಸಂಪ್ರದಾಯದ ತಾಲೂಕು ಘಟಕದ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಾಲೂಕಿನಲ್ಲಿ ಈ ಸಂಪ್ರದಾಯದ ಅನುಯಾಯಿಗಳ ಸಂಪರ್ಕ ಹೊಂದಿದ್ದಾರೆ ಈಗಿನ ತಾಲೂಕಾ ಕಾರ್ಯದರ್ಶಿ ಕೂಡ ಅವರು ಇದ್ದು ಅದು ಸಾಮಾಜಿಕ ನೆಲೆಯ ಭಾಗವಾಗಿದೆ. ಹಿಂದಿನಿಂದಲೂ ಪಕ್ಷದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಪತ್ನಿ ಅಂಕಿತಾ ಸಂದೀಪ ಗಾವಡಾ ಅವರು ಜೋಯಿಡಾ ಗ್ರಾಮ ಪಂಚಾಯಿತಿಯ ಸದಸ್ಯೆಯಾಗಿ ಕೂಡ ಹಿಂದೆ ಕೆಲಸ ಮಾಡಿದ್ದಾರೆ ಪಕ್ಷದ ಸಂಘಟನೆಯಲ್ಲಿನ ಅನುಭವವಿದೆ ಈ ಆಧಾರದಲ್ಲಿ ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ