ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನಲ್ಲಿ ದೀಪಗಳ ಹಬ್ಬ ದೀಪಾವಳಿಯ ಹಬ್ಬದ ಆರಂಭಿಕ ಸಿದ್ಧತೆಯ ಸೂಚನೆಗಳು ಕಾಣಲಾರಂಭಿಸಿದೆ.

ತಾಲೂಕಿನ ಬುಡಕಟ್ಟಿನ ಸಂಪ್ರದಾಯ,ಸಂಸ್ಕೃತಿಯ ಹಿನ್ನೆಲೆಯನ್ನು ಹೊಂದಿರುವ ಕುಣಬಿ ಜನಾಂಗದ ಬಾಂಧವರು ವಿಶಿಷ್ಟ ರೀತಿಯಲ್ಲಿ ಆಚರಿಸುವ ಪದ್ಧತಿ ಇದೆ. ದೀಪಾವಳಿಯ ಹಬ್ಬದ ಐದು ದಿನದ ಮೊದಲು ಅಂಗಳವನ್ನು ಗೋವಿನ ಸಗಣಿಯಿಂದ ಸಾರಿಸಿ,ತುಳಸಿ ಕಟ್ಟೆಯ ಮುಂದೆ ರಂಗೋಲಿ ಅಲಂಕಾರ ಹಾಕಿ,ಗೋವಿನ ಸಗಣಿಗೆ ವಿವಿಧ ಹೂವಿನ ಅಲಂಕಾರವನ್ನು ಮಾಡಿ ಎಣ್ಣೆಯ ದೀಪವನ್ನು ಹಚ್ಚಿ ಹಬ್ಬ ಮುಗಿಯುವವರಗೆ ದಿನಾಲು ಪೂಜಿಸುವ ಪದ್ಧತಿ ನಾವು ಕಾಣಬಹುದಾಗಿದೆ.

 

ಇದನ್ನು ಕೊಂಕಣಿ ಭಾಷೆಯಲ್ಲಿ ದಿಂಡ್ಲೋ ಎಂದು ಕರೆಯುತ್ತಾರೆ. ಕಾತೇಲಿ(ಕುಂಬಾರವಾಡ)ಗ್ರಾಮ ಪಂಚಾಯತದ ವ್ಯಾಪ್ತಿಯ ಡೇರಿಯಾ ಗ್ರಾಮದ ಡೇರೆಕರ ಕುಟುಂಬದವರು ತಮ್ಮ ದೇವರ ಮನೆಯ ಅಂಗಳದ ತುಳಸಿ ಕಟ್ಟೆಯ ಮುಂದೆ ಪೂಜಿಸಿದ ದಿಂಡ್ಲೋವಿನ ದೃಶ್ಯ.