Banner Ad

ಸುದ್ದಿ ಕನ್ನಡ ವಾರ್ತೆ

ಹಳಿಯಾಳ:ತಾಲೂಕಿನ ಅಂಬಿಕಾನಗರ-ಬೊಮ್ಮನಹಳ್ಳಿ ರಸ್ತೆಯ ಮಾರ್ಗದಲ್ಲಿ ಒಂಟಿ ಸಲಗವೊಂದು ನಡು ರಸ್ತೆಯಲ್ಲಿ ಸಂಚರಿಸಿ ಎರಡು ಸಾರಿಗೆ ಬಸ್ ಗಳನ್ನು ಕೆಲ ನಿಮಿಷಗಳ ಕಾಲ ತಡೆದು ನಿಲ್ಲಿಸಿದ ಘಟನೆ ಬುಧವಾರ ನಡೆದಿದೆ. ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕ, ನಿರ್ವಾಹಕ, ಪ್ರಯಾಣಿಕರು ಭಯಭೀತರಾದರು.

Banner Ad

ಕೆಲ ಪ್ರಾಣಿಪ್ರಿಯರು ಹತ್ತಿರದಿಂದ ಆನೆಯನ್ನು ನೋಡಿ ಖುಷಿಪಟ್ಟರು. ಇತ್ತೀಚಿನ ದಿನಗಳಲ್ಲಿ ಆನೆಗಳು ನಡು ರಸ್ತೆಯಲ್ಲಿ ಸಂಚರಿಸುವ ಮೂಲಕ ವಾಹನಗಳನ್ನು ಅಡ್ಡಗಟ್ಟಿ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಸಾರಿಗೆ ಸಂಸ್ಥೆಯ ಬಸ್ ಗಳು ತಮ್ಮ ಮಾರ್ಗದಲ್ಲಿ ಬರುವಾಗ ನಡು ರಸ್ತೆಯಲ್ಲಿ ಸಾಗಿದ ಒಂಟಿ ಸಲಗವು ಕೆಲ ನಿಮಿಷ ಸಂಚಾರಕ್ಕೆ ತಡೆಯೊಡ್ಡಿ ನಂತರ ರಸ್ತೆಯ ಬದಿಯಲ್ಲಿ ನಿಂತು ಬಸ್ ಸಂಚಾರಕ್ಕೆ ಅವಕಾಶ ಮಾಡಿತು.

ಮುಂಭಾಗದಿಂದ ಪ್ರಯಾಣಿಸುತ್ತಿದ್ದ ವಾಹನ ಸವಾರರು,ಬಸ್ಸಿನ ಪ್ರಯಾಣಿಕರು,ತಮ್ಮ ಮೊಬೈಲ್ ನಲ್ಲಿ ಪೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆಯವರು ವಾಹನ ಸಂಚಾರ ಮಾಡುವಾಗ,ವಿಶೇಷವಾಗಿ ಬೆಳಗಿನ ಹಾಗೂ ರಾತ್ರಿಯ ವೇಳೆಯಲ್ಲಿ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎಂದು ತಿಳಿಸಿದೆ.

Banner Ad