Banner Ad

ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಮೆಗಾಬೈಟ್ ಸೈಬರ್ ಸೆಂಟರ್ ನ ಮಾಲಕರು,ವ್ಯಾಪಾರಸ್ಥರ ಸಂಘದ ಕ್ರೀಯಾಶೀಲ ಸದಸ್ಯರು,ಕಲೆ,ಸಾಹಿತ್ಯ,ಸಂಗೀತ,ಕ್ರೀಡೆ,ಸಾಂಸ್ಕೃತಿಕ,ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ,ವಿಶೇಷವಾಗಿ ಯುವಜನ ಮೇಳ,ಯುವಜನ ಸೇವೆ,ಯುವಜನ ಕ್ರೀಡೆಯನ್ನು ಆಯೋಜಿಸುವಲ್ಲಿ ಪ್ರಮುಖ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡು ಸದಾ ನಗು ಮುಖದ, ಕಷ್ಟದಲ್ಲಿದ್ದರವರನ್ನು, ಹಿರಿಯರ,ಇಲಾಖೆಯ ಯಾವುದೇ ಕೆಲಸಗಳಿರಲಿ ಸಲಹೆ, ಮಾರ್ಗದರ್ಶನ,ಸಹಕಾರ ಮನೋಭಾವದ ಜೋಯಿಡಾ ತಾಲೂಕಿನ ಚಿರಪರಿಚಿತ ಬಹುಮುಖ ಪ್ರತಿಭೆಯು ಕಳೆದ ವಾರದ ಹಿಂದೆ ನಡೆದ ಆಮದಳ್ಳಿಯ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ನಡೆದ ಬೈಕ್ ಹಾಗೂ ಸ್ಕೂಟಿಯ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಆಸ್ಪತ್ರೆಯಲ್ಲಿ ಸುಮಾರು ಆರು ದಿನಗಳಿಂದ ಜೀವನ ಮರಣದ ನಡುವೆ ಹೋರಾಟ ನಡೆಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಸಚಿನ್ ತಳೇಕರ ಅವರ ನಿಧನ ತುಂಬಾ ಆಘಾತಕಾರಿ ಸುದ್ದಿಯಾಗಿದೆ.

Banner Ad

ಮೃತರ ಸುದ್ದಿಯನ್ನು ತಿಳಿದು ಜೋಯಿಡಾ ವ್ಯಾಪಾರಸ್ಥ ಸಂಘದವರು,ಗಣ್ಯರು,ಸಾಮಾಜಿಕ ಕಾರ್ಯಕರ್ತರು,ವಿವಿಧ ಇಲಾಖೆಯ ಅಧಿಕಾರಿ ವರ್ಗದವರು,ಸಂಘ,ಸಂಸ್ಥೆಗಳ ಪದಾಧಿಕಾರಿಗಳು,ಸಹಪಾಠಿಗಳು,ಮಿತ್ರ ವೃಂದದವರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಕಂಬನಿ ಮಿಡಿದಿದ್ದಾರೆ.

Banner Ad