Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಕ್ಷೇತ್ರದ ಹಲವು ಬೇಡಿಕೆ‌ ಸಲ್ಲಿಸಿದರು.

Banner Ad

ಕುಮಟ ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ಫಾರಂ ನಿರ್ಮಿಸಬೇಕು, ಪ್ಲಾಟ್ಫಾರಂನ ಎತ್ತರವನ್ನು ಎತ್ತರಿಸಬೇಕು, ಬೆಂಗಳೂರು ಮುರುಡೇಶ್ವರ ರೈಲನ್ನು ವಾಸ್ಕೋವರೆಗೆ ವಿಸ್ತರಿಸಬೇಕು, ಕಾಚಿಗುಡ ಎಕ್ಸ್ಪ್ರೆಸ್ ನ್ನು ಮುರುಡೇಶ್ವರ ದಿಂದ ಕಾರವಾರದ ವರೆಗೆ ವಿಸ್ತರಿಸಬೇಕು. ಹಾಗೂ ಖಾನಾಪುರ ರೈಲ್ವೆ ನಿಲ್ದಾಣದ ಅಭಿವೃದ್ಧಿ ಮತ್ತು ಕೆಳ ಸೇತುವೆಯ ಕಾಮಗಾರಿಯನ್ನು ತ್ವರಿತ ವಾಗಿ ಪೂರ್ಣ ಗೊಳಿಸುವಂತೆ ಆಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

Banner Ad