Banner Ad

ಸುದ್ಧಿ ಕನ್ನಡ ವಾರ್ತೆ

ಅಂಕೋಲಾ : ಮನೆಯ ಎದುರಿನ‌ ಗೇಟ ಹತ್ತಿಕೊಂಡು ಆಟವಾಡುತ್ತಿದ್ದ ಮಗುವಿನ ಮೇಲೆ‌ ಕಬ್ಬಿಣದ ಗೇಟ ಮುರಿದು ಬಿದ್ದು ಮಗು ಮೃತಪಟ್ಟ ಘಟನೆ ತಾಲೂಕಿನ ಕನಸೆಗದ್ದೆಯಲ್ಲಿ ನಡೆದಿದೆ.

Banner Ad

ಕನಸೆಗದ್ದೆಯ ಆಜಾನ ಜಾವೀದ ಶೇಖ್ ಎನ್ನುವ ಆರು ವರ್ಷದ ಮಗು ಮೃತಪಟ್ಟ ದುರ್ದೈವಿ. ಪಟ್ಟಣದ ಉರ್ದು ಮಾದ್ಯಮದ ಶಾಲೆಯಲ್ಲಿ ಒಂದನೇ ತರಗತಿಗೆ ಹೊಗುತ್ತಿದ್ದ ಮಗು ಸಂಜೆ ವೇಳೆ ಮನೆಯ ಎದುರಿನ ಗೇಟನಲ್ಲಿ ತನ್ನ ಸಹಪಾಠಿಗಳೊಂದಿಗೆ ಆಟ ಆಡಿಕೊಂಡಿದ್ದು ಆಸಮಯದಲ್ಲಿ ಗೇಟ್ ಗೆ ಅಳವಡಿಸಿದ ಲಾಕ್ ಕಟ್ಟಾಗಿ ಮಗುವಿನ ಮೇಲೆ ಬಿದ್ದಿದೆ. ತಕ್ಷಣ ಮಗುವನ್ನು ಅಂಕೋಲಾ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಕರೆದುಕೊಂಡು ಹೋಗುವಾಗ ಹೊನ್ನಾವರ ಬಳಿ ಮಗು ದಾರಿ ಮದ್ಯೆ ಮೃತಪಟ್ಟಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad