ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ನಂದಿಗದ್ದಾ ಸೇವಾ ಸಹಕಾರಿ ಸಂಘಕ್ಕೆ ತಾಲೂಕಿನ ಉತ್ತಮ ಸಹಕಾರಿ ಸಂಘ,, ಪ್ರಶಸ್ತಿ ಪ್ರದಾನ….

ನಂದಿಗದ್ದಾ ವಿವಿದೊದ್ದೇಶ ಸಹಕಾರಿ ಸಂಘಕ್ಕೆ ಈ ವರ್ಷದ ತಾಲೂಕಿನ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಜಿಲ್ಲಾ ಮಧ್ಯವರ್ತಿಬ್ಯಾಂಕ ಶಿರಸಿ,, (ಕೆ ಡಿ ಸಿ ಸಿ ಬ್ಯಾಂಕ) ಇವರು ನೀಡಿರುತ್ತಾರೆ ಹಳಿಯಾಳ ದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭ ದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಆರ್ ವಿ ದಾನಗೇರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಶಿವರಾಮ ದಬಗಾರ ಅವರು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮ ದಲ್ಲಿ ಕೆ ಡಿ ಸಿ ಸಿ ಬ್ಯಾಂಕ್ ನ ನೂತನ ನಿರ್ದೇಶಕರಾದ ಮಾಜಿ ಎಂ ಎಲ್ ಸಿ ಎಸ್ ಎಲ್ ಘೋಟ್ನೆಕರ,ಕೆ ಡಿ ಸಿ ಸಿ ಬ್ಯಾಂಕ್ ಜೋಯಿಡಾ ದ ನಿರ್ದೇಶಕರು ಪಣಸೋಲಿಯ ಕೃಷ್ಣಾ ದೇಸಾಯಿ ಮಾಜಿ ಶಾಸಕರು ಸುನೀಲ ಹೆಗಡೆ ನಂದಿಗದ್ದಾ ಸಹಕಾರಿ ಸಂಘದ ಉಪಾಧ್ಯಕ್ಷರು ಸುದರ್ಶನ್ ಭಾಗ್ವತ ಸಹಕಾರಿ ಯೂನಿಯನ್ ಸದಸ್ಯ ಶಶಿಕಾಂತ ಹೆಗಡೆ, ರಾಮನಗರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗುರುನಾಥ ಕಾಮತ ಅಸಿಸ್ಟಂಟ್ ರಜೀಸ್ಟ್ರಾರ್ ಎಸ್ ಸಜ್ಜನ್ ಮತ್ತು ಉಳವಿ ರಾಮನಗರದ ಪ್ರಮುಖರು ಉಪಸ್ಥಿತರಿದ್ದರು