Banner Ad

ಸುದ್ಧಿ ಕನ್ನಡ ವಾರ್ತೆ

ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಸುವುದಾಗಿ ನಂಬಿಸಿ ಮೋಸ ಮಾಡಿರುವಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಇದೀಗ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಎಂಬ ಊರಲ್ಲಿ ಇಂತಹದ್ದೇ ಘಟನೆ ನಡೆದಿದೆ. ಈ ಘಟನೆಯಲ್ಲಿ ಇಲ್ಲಿನ ಪುರೋಹಿತರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ಮೋಸ ವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

Banner Ad

ಮೂವರು ವ್ಯಕ್ತಿಗಳು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆಯ ಪುರೋಹಿತರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಮೋಸ ವೆಸಗಿದ್ದಾರೆ. ಈ ಪುರೋಹಿತರಿಗೆ ಉತ್ತರ ಭಾರತದ ಯುವತಿಯನ್ನು ಮದುವೆ ಮಾಡಿಸುವುದಾಗು ನಂಬಿಸಿ ಇವರಿಂದ 6 ಲಕ್ಷ ರೂ ಹಣಪಡೆದು ಮೋಸವೆಸಗಿದ್ದಾರೆ ಎಂದು ಯಲ್ಲಾಪುರ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಯಲ್ಲಾಪುರ ತಾಲೂಕಿನ ಕಳಚೆ ಊರಿನ ಕರಿಮನೆಯಲ್ಲಿ ವಾಸವಾಗಿರುವ ರಾಮಕೃಷ್ಣ ಭಟ್ ರವರು ಪುರೋಹಿತ್ಯ ಮಾಡಿಕೊಂಡಿದ್ದರು. 37 ವರ್ಷವಾದರೂ ಅವರಿಗೆ ಮದುವೆ ಭಾಗ್ಯ ಕೂಡಿಬಂದಿರಲಿಲ್ಲ. ಈ ಪುರೋಹಿತರಿಗೆ ಲಕ್ಷ್ಮೀನಾರಾಯಣ ಭಟ್ ಸೋಂದಾ, ಬಕ್ಕಳದ ನಾಗರಾಜ ಭಟ್ ಹಾಗೂ ಉತ್ತರ ಪ್ರದೇಶ ರೇಣುಕಾಕೋಟದ ಮಾಲಾ ಜಿ ತ್ರಿಪಾಠಿ ರಾಮಕೃಷ್ಣ ಭಟ್ ರವರಿಗೆ ಮದುವೆ ಮಾಡಿಸುವುದಾಗಿ ಹೇಳಿದ್ದರು.

 

ಉತ್ತರ ಪ್ರದೇಶದಿಂದ ಈ ಪುರೋಹಿತರಿಗೆ ಕನ್ಯೆ ಕೊಡಿಸುವುದಾಗಿ ಮಾತನಾಡಿ, ವ್ಯವಹಾರವನ್ನೂ ಮುಗಿಸಿ ರಾಮಕೃಷ್ಣ ಭಟ್ ರವರಿಂದ 6 ಲಕ್ಷ ರೂ ಹಣವನ್ನೂ ಪಡೆದಿದ್ದರು. ಉತ್ತರ ಪ್ರದೇಶ ಗೋಪಾಲಪುರದ ಪೂಜಾ ಮಿಶ್ರಾ ಜೊತೆ ರಾಮಕೃಷ್ಣ ಭಟ್ ರವರ ಸಂಬಂಧ ಬೆಸೆಯುವ ಸಿದ್ದತೆಯನ್ನೂ ನಡೆಸಿದರು. ಲಕ್ಷ್ಮೀನಾರಾಯಣ ಭಟ್, ನಾಗರಾಜ ಭಟ್ ಹಾಗೂ ಮಾಲಾ ಜಿ ತ್ರಿಪಾಠಿ ಸೇರಿ ರಾಮಕೃಷ್ಣ ಭಟ್ ರವರನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ದು ಗೋಪಾಲಪುರದ ಪೂಜಾ ಮಿಶ್ರಾ ಅವಳೊಂದಿಗೆ ನಿಶ್ಚಿತಾರ್ಥ ಕಾರ್ಯವನ್ನೂ ಪೂರ್ಣಗೊಳಿಸಿದ್ದರು.

ನಂತರ ಪೂಜಾ ಮಿಶ್ರಾ ಅವರು ರಾಮಕೃಷ್ಣ ಭಟ್ ರವರನ್ನು ಭೇಟಿಯಾಗಲು ಯಲ್ಲಾಪುರ ತಾಲೂಕಿನ ಕಳಚೆಗೆ ಬಂದಿದ್ದು ಅಗಸ್ಟ 17ರಂದು ಬೆಳಗ್ಗೆ ವಾಯುವಿಹಾರಕ್ಕೆ ಹೋಗೋಣ ಎಂದು ರಾಮಕೃಷ್ಣ ಭಟ್ ರವರನ್ನು ಕರೆದೊಯ್ದ ಪೂಜಾ ಮಿಶ್ರಾ ಅವರು ರಾಮಕೃಷ್ಣ ಭಟ್ ರವರನ್ನು ರಸ್ತೆ ಬದಿಗೆ ದೂಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ನಿಶ್ಚಿವಾದ ಮದುವೆಯನ್ನೂ ಮಾಡಿಸಲಿಲ್ಲ-ಮದುವೆ ಮಾಡಿಸುವುದಾಗಿ ಪಡೆದ 6 ಲಕ್ಷ ಹಣವನ್ನೂ ವಾಪಸ್ಸು ನೀಡಿಲ್ಲ ಎಂಬ ಕಾರಣಕ್ಕೆ ರಾಮಕೃಷ್ಣ ಅನಂತ ಭಟ್ ಕರಿಮನೆ ಕಳಚೆ ಇವರು ಯಲ್ಲಾಪುರ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದರು. ಅವರ ಜೊತೆ ಲಕ್ಷ್ಮೀನಾರಾಯಣ ಭಟ್, ನಾಗರಾಜ ಭಟ್ ಹಾಗೂ ಮಾಲಾ ಜಿ ತ್ರಿಪಾಠಿ ಅವರಿಂದಲೂ ಅನ್ಯಾಯವಾದ ಬಗ್ಗೆ ಸದ್ರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈ ಕುರಿತು ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪಿಎಸ್‍ಐ ಪಶೇಡಜಿ ಚೌಹ್ವಾಣ್ ತನಿಖೆ ನಡೆಸುತ್ತಿದ್ದಾರೆ. ಪಿಐ ರಮೇಶ ಹಾನಾಪುರ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸಿದ್ದಾರೆ.

ಹವ್ಯಕರಲ್ಲಿ ಕನ್ಯೆಯ ಕೊರತೆಯಿಂದಾಗಿ ಹವ್ಯಕರಲ್ಲಿ ಅದೆಷ್ಟೋ ಜನ ಹುಡುಗರು ವಿವಾಹವಾಗದೆಯೇ ಹಾಗೆಯೇ ಉಳಿದುಕೊಂಡಿದ್ದಾರೆ. ಕೆಲವರು ಹೊರ ರಾಜ್ಯಗಳಿಂದ ಬ್ರಾಹ್ಮಣ ಕನ್ಯೆಯನ್ನು ವಿವಾಹ ಮಾಡಿಕೊಳ್ಳಲು ಪ್ರಯತ್ನಿಸಿ ಈರೀತಿ ಮೋಸವಾಗುತ್ತಿರುವುದು ಖೇದಕರ ಸಂಗತಿಯೇ ಆಗಿದೆ.

Banner Ad