ಸುದ್ದಿ ಕನ್ನಡ ವಾರ್ತೆ
ಡೇಟಿಂಗ್ ಯಾಪ್ ನಲ್ಲಿ ಸಂಪರ್ಕಕ್ಕೆ ಬಂದ ಯುವತಿ ಒಬ್ಬಳು ನನ್ನ ಸಹಚರರ ಸಹಾಯದಿಂದ ಮುಂಬೈ ವಿಲೇ ಪಾರ್ಲೆಯ 61 ವರ್ಷದ ವ್ಯಕ್ತಿಗೆ ಗೋವಾಕ್ಕೆ ಕರೆ ಮಾಡಿ 6 ಲಕ್ಷ ರೂ ಗಳಿಗಿಂತಲೂ ಹೆಚ್ಚು ಹಣವನ್ನು ದೋಚಿರುವ ಗಂಭೀರ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಗೋವಾದ ಹಣಜುಣ ಪೊಲೀಸರು ನಾಲ್ವರು ಯುವತಿಯರು ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಸುಲಿಗೆ ಮತ್ತು ವಿವಿಧ ಸೆಕ್ಷನ್ ಗಳ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ ಈ ಘಟನೆ 10 ಡಿಸೆಂಬರ್ 2025 ರಂದು ಬೆಳಿಗ್ಗೆ 12:30 ರ ಸುಮಾರಿಗೆ ಗೋವಾದ ಭಾಗ ಹಡಪಡೆ ಯ ವಿಲ್ಲಾ ವಿಟಮಿನ್ ಸಿ ಎಂಬಲ್ಲಿ ನಡೆದಿದೆ. ಅಕ್ಟೋಬರ್ 8ರಂದು ಈ ಕುರಿತು ಪೊಲೀಸರು ಪ್ರಕರಣದ ಕಲಿಸಿದ್ದಾರೆ. ಶಂಕಿತರಲ್ಲಿ ಚೈತಲಿ ಲಕ್ಷ್ಮಣ್ , ಕಾವ್ಯ ಶರ್ಮ ಮತ್ತು ಇತರ ನಾಲ್ವರು ಪರಿಚಿತ ಶಂಕಿತರು ಸೇರಿದ್ದಾರೆ.
ಶಂಕಿತ ಆರೋಪಿ ಚೈತಾಲಿ ಡೇಟಿಂಗ್ ಯಾಪ್ ಮೂಲಕ ದೂರುದಾರರನ್ನು ಸಂಪರ್ಕಿಸಿ ಗೋವಾಕ್ಕೆ ಬರುವಂತೆ ಮನವೊಲಿಸಿದ್ದಾರೆ. ಅದರಂತೆ ಅವರು ಘಟನೆಯ ಹಿಂದಿನ ದಿನ ಡಿಸೆಂಬರ್ 9ರಂದು ಗೋವಾಕ್ಕೆ ಬಂದು ಭಾಗ ಅಡಪಡೆ ವಿಲ್ಲಾದಲ್ಲಿ ಬಂದರು. ಸ್ವಲ್ಪ ಸಮಯದ ನಂತರ ಚೈತಾಲಿ ಸಂಗೀತ ಕಾವ್ಯಾ ಶರ್ಮಾ ಅಲ್ಲಿಗೆ ಅಪರಿಚಿತ ಮಹಿಳೆಯನ್ನು ಕರೆದರು. ನಂತರ ಅವರು ದೂರುದಾರರ ಬಟ್ಟೆಗಳನ್ನು ಬಲವಂತವಾಗಿ ತೆಗೆದುಹಾಕಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಇಬ್ಬರು ಪರಿಚಿತ ಪುರುಷರು ಮತ್ತು ಒಬ್ಬ ಮಹಿಳೆ ವಿಲ್ಲಾ ಒಳಗೆ ಪ್ರವೇಶಿಸಿದರು.
ಆರೋಪಿಗಳು ದೂರುದಾರರನ್ನು ಬಲವಂತವಾಗಿ ಥಳಿಸಿ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಅಶ್ಲೀಲ ಕೃತ್ಯಗಳನ್ನು ನಡೆಸುವಂತೆ ಹೊತ್ತಾಯಿಸಿ ಅವರ ಮೊಬೈಲ್ ಫೋನ್ಗಳಲ್ಲಿ ಅವರ ಅಖಿಲ ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿದರು. ನಂತರ ಅವರು ಈ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಯುಪಿಐ ಮೂಲಕ ಆನ್ಲೈನ್ ನಲ್ಲಿ 50,000 ನಗದು ಮತ್ತು 45,000ಗಳನ್ನು ಸುಲಿಗೆ ಮಾಡಿದರು. ಇಷ್ಟೇ ಅಲ್ಲದೆ ಅವರು ಬಲವಂತವಾಗಿ ಆಕೆಯ ಕೈಯಿಂದ 20 ಗ್ರಾಂ ಚಿನ್ನದ ಉಂಗುರ 40 ಗ್ರಾಂ ಚಿನ್ನದ ಸರ ಮತ್ತು 70000 ಗಡಿಯಾರವನ್ನು ಕಸಿದುಕೊಂಡರು. ಇದರ ನಂತರ ಎಲ್ಲಾ ಶಂಕಿತರು ದೂರುದಾರರನ್ನು ವಿಲ್ಲಾದಲ್ಲಿ ಬಂಧಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಘಟನೆಯ ನಂತರ ದೂರುದಾರರು ಮುಂಬೈಗೆ ತೆರಳಿದರು. ಇಂತಹ ನಾಚಿಕೆಗೇಡಿನ ಮತ್ತು ಮಾನಹಾನಿಕರ ಘಟನೆ ಬೇರೆಯವರಿಗೆ ಸಂಭವಿಸದಂತೆ ನಡೆಯುವ ಉದ್ದೇಶದಿಂದ ಘಟನೆಯ ಸುಮಾರು ಮೂರು ತಿಂಗಳ ನಂತರ ಅವರು ಧೈರ್ಯದಿಂದ ಗೋವಾ ಹಣಜಣ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದರು. ಹುಲಿತರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
