ಸುದ್ದಿ ಕನ್ನಡ ವಾರ್ತೆ
ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ ಬಾಲಿವುಡ್ ನಟ ನಾನಾ ಪಾಟೇಕರ್ ರವರ ಸಾವನ್ನು ಗೋವಾ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಇವರ ಸಾವಿನ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿದೆ.
ಗುರುವಾರ ಬೆಳಿಗ್ಗೆ ಗೋವಾದ ದೋನಪೌಲ ದಲ್ಲಿರುವ ಅವರ ನಿವಾಸದಲ್ಲಿ ನಾನಾ ಪಾಟೇಕರ್ ರವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಹತ್ತಿರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಪರಿಸದೆ ಅವರು ಸಾವನ್ನಪ್ಪಿದ್ದರು.
ನಂತರ ನಾನಾ ಪಾಟೇಕರ್ ರವರ ಮೃತ ದೇಹವನ್ನು ಗೋವಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅವರ ಕುಟುಂಬಸ್ಥರು ಮೃತ ದೇಹವನ್ನು ಅಂತಿಮ ವಿಧಿ ವಿಧಾನಕ್ಕಾಗಿ ಪುಣೆಗೆ ಕರೆದುಯ್ದಿದ್ದರು.
ಇದೀಗ ಗೋವಾ ಪೊಲೀಸರು ನಾನಾ ಪಾಟೇಕರ್ ರವರ ಸಾವನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವುದು ಹಲವು ಪ್ರಶ್ನೆಗೆ ಕಾರಣ ವಾಗಿದೆ.
