ಸುದ್ದಿ ಕನ್ನಡ ವಾರ್ತೆ

ಪಣಜಿ: ಕಳೆದ ಸುಮಾರು 20 ವರ್ಷಗಳಿಂದ ಗೋವಾದ ರಾಯಬಂದರ್ ಶ್ರೀರಾಮ ಮಂದಿರದಲ್ಲಿ ಅರ್ಚಕರಾಗಿ ಸೇವೆ ಸಲ್ಲಸುತ್ತಿರುವ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಗಣಪತಿ ಕೃಷ್ಣ. ಭಟ್ ರವರನ್ನು ಪಣಜಿ ಸಮೀಪದ ಸಾಂತಕ್ರೂಜ್ ನಲ್ಲಿ ಆಯೋಜಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ರುಡಾಲ್ಫ ಫರ್ನಾಂಡಿಸ್ ಸನ್ಮಾನಿಸಿದರು.

ಗಣಪತಿ ಭಟ್ ರವರು ಕಳೆದ ಸುಮಾರು 20 ವರ್ಷಗಳಿಂದ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತ ಜನರಲ್ಲಿ ಧಾರ್ಮಿಕ, ಆಸ್ತಿಕ ಭಾವನೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವ ಹಿನ್ನೆಲೆಯಲ್ಲಿ ಸಾಂತಕ್ರೂಜ್ ವೆಲ್ ಫೇರ್ ಅಸೋಸಿಯೇಶನ್ ಗಣಪತಿ ಭಟ್ ರವರನ್ನು ಸನ್ಮಾನಕ್ಕಾಗಿ ಆಯ್ಕೆ ಮಾಡಿತ್ತು.

 

ನಂತರ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ಧ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸನ್ಮಾನಿತರನ್ನು ಅಭಿನಂದಸಿದರು.