ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ತಾಲೂಕಿನಲ್ಲಿ ಇದೇ ಬರುವ ದಿ.26 ರಿಂದ ಅಕ್ಟೋಬರ್ 2ರ ಗಾಂಧೀಜಿ ಜಯಂತಿ ವರೆಗೆ ಸ್ವಚ್ಛತಾ ಅಭಿಯಾನ ನಡೆಯಬೇಕು ಎಂದು ಶಾಸಕರು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಆಗಿರುವ ಆರ್.ವಿ.ದೇಶಪಾಂಡೆ ಹೇಳಿದರು.

ಅವರು ಇಂದು ಕುಂಬಾರವಾಡದಲ್ಲಿ ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರತಿ ಗ್ರಾಮ ಪಂಚಾಯತದ ಪ್ರತಿ ಹಳ್ಳಿಯಲ್ಲೂ ಸ್ವಚ್ಛತೆ ಇರಬೇಕು ಅಂದಾಗ ಮಾತ್ರ ಆರೋಗ್ಯ ಭಾಗ್ಯ ಚೆನ್ನಾಗಿರುತ್ತದೆ. ಇದು ಕೇವಲ ಕಾಟಾಚಾರದ ಅಭಿಯಾನವಾಗಿರದೆ ನಿಜವಾಗಿ ಎಲ್ಲರೂ ಪಾಲ್ಗೊಂಡು ತಾಲೂಕನ್ನು ಸ್ವಚ್ಛವಾಗಿಡಬೇಕು ಎಂದರು.