ಸುದ್ದಿ ಕನ್ನಡ ವಾರ್ತೆ
ಶಿರಸಿ ಯ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಕುಟುಂಬ ದವರು,
ಚಾತುರ್ಮಾಸ್ಯ ವ್ರತ ಸಂಕಲ್ಪದಲ್ಲಿರುವ ಸೊಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ
ಹಾಗೂ ಆನಂದ ಭೋಧೆಂದ್ರ ಸರಸ್ವತಿ ಮಹಾಸ್ವಾಮಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮುಂಜಾನೆಯಿಂದಲೇ ಶ್ರೀ ಮಠದ ಆರಾಧ್ಯ ದೇವರಾದ ಲಕ್ಷ್ಮೀ ನರಸಿಂಹ,ಚಂದ್ರ ಮೌಳೇಶ್ವರಿ, ರಾಜರಾಜೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು , ಶ್ರೀಗಳ ಪಾದುಕಾ ಪೂಜೆ, ಅರ್ಚನೆ, ಷೋಡಶೋಪಚಾರ ಪೂಜೆ ಸಲ್ಲಿಸಿದರು. ನಂತರ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಅನಂತಮೂರ್ತಿ ಹೆಗಡೆ ದಂಪತಿಗಳನ್ನು ಹಾಗೂ ಕುಟುಂಬದವರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು
