ಸುದ್ದಿ ಕನ್ನಡ ವಾರ್ತೆ

ಪುಣ್ಯ ಕ್ಷೇತ್ರ ಉಳವಿಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಮತ್ತು ಸಾಯಂಕಾಲ ಬಸ್ ಬಿಡಿ ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ. ಬಸ್ ಇಲ್ಲದೇ ಮಕ್ಕಳ ಶಿಕ್ಷಣಕ್ಕೆ ಸಾರಿಗೆ ಇಲಾಖೆಯಿಂದ ತೊಂದರೆ ಎಂದಿದ್ದಾರೆ.

ಸರಕಾರದ ವಿವಿಧ ಇಲಾಖೆಗಳು ಇರುವುದು ಜನರ ಅನುಕೂಲಕ್ಕಾಗಿ ಆದರೆ ಅವು ಕಾಟಾಚಾರಕ್ಕೆ ಎಂದಾದರೆ , ಜನರ ಪಾಡೇನು ? ಅದರಲ್ಲೂ ಶಾಲೆಯ ಕಾಲೇಜಿನ ವಿದ್ಯಾರ್ಥಿ ಗಳಿಗೆ ವೇಳೆಗೆ ಸರಿಯಾಗಿ ಬಸ್ ಗಳು ಇಲ್ಲದಿದ್ದರೆ ಅವರ ಶಿಕ್ಷಣದ ಗತಿ ಏನು ? ನಡು ದಾರಿಯಲ್ಲಿ ಮಳೆ ಗಾಳಿ , ಕಾಡು ಪ್ರಾಣಿಗಳ ಉಪಟಳದಿಂದ ಆಗುವ ತೊಂದರೆಗಳಿಗೆ ಯಾರು ಜವಾಬ್ದಾರರು ಎನ್ನುವ ಪ್ರಶ್ನೆ ಈಗ ಜನತೆಯನ್ನು ಕಾಡಿದೆ. ಪುಣ್ಯ ಕ್ಷೇತ್ರ ಉಳವಿಗೆ ಹುಬ್ಬಳ್ಳಿ , ಬೆಳಗಾವಿ , ಬೈಲಹೊಂಗಲ , ಶಿರಸಿ ಹೀಗೆ ಬೇರೆ ಬೇರೆ ಊರುಗಳಿಂದ ಬಸ್ ಗಳಿದ್ದು ಈ ಬಸ್ ಗಳು ಹೊರ ಊರುಗಳಿಂದ ಪ್ರವಾಸಿಗರನ್ನು ಕರೆ ತರುತ್ತವೆ. ತುಂಬಿಕೊಂಡು ಹೋಗುತ್ತವೆ, ಅದೂ ಕೂಡ ತಮ್ಮ ತಮ್ಮ ವೇಳೆಯಲ್ಲಿ ಹೋಗುತ್ತವೆ. ಇದು ಬೆಳಿಗ್ಗೆ ಶಾಲೆ , ಕಾಲೇಜುಗಳಿಗೆ ಹೋಗುವ ಮತ್ತು ಬರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಲ್ಲ. ಅಲ್ಲದೆ ಪ್ರಯಾಣಿಕರಿಂದ ತುಂಬಿದ್ದು,ಕೆಲವು ಸಲ ನಿಂತರೂ ಇನ್ನೂ ಕೆಲವು ಸಲ ನಿಲ್ಲಿಸುವುದಿಲ್ಲ. ಹೀಗಾಗಿ ಉಳವಿ , ಕಡಗರಣಿ ಅಂಬೊಳ್ಳಿ, ಚಂದ್ರಾಳಿ , ಕಾಳಸಾಯಿ ಯ ವಿದ್ಯಾರ್ಥಿಗಳು ಶಾಲೆಗಳಿಗೆ ಸರಿಯಾಗಿ ಹೋಗಲಿಕ್ಕೆ ಆಗದೆ ಶಿಕ್ಷಣದಿಂದ ವಂಚಿತರಾಗುತ್ತಾರೆ. ಉಳವಿ ಕುಂಬಾರವಾಡ, ಜೊಯಿಡಾ ಈ ಮಾರ್ಗದಲ್ಲಿ ಸುಮಾರು 80 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಬಸ್ಸಿನ ಸಮಸ್ಯೆಯಿಂದ ಕೆಲವರು ಶಾಲೆಗೆ ಹೋಗದಿದ್ದರೆ , ಕೆಲವರು ಖಾಸಗಿ ವಾಹನದಲ್ಲಿ ಹೋಗಿ , ಪುನಃ ಬರಲು ಪರದಾಡುವಂತಾಗಿದೆ. ಆದ್ದರಿಂದ ಸಾರಿಗೆ ಇಲಾಖೆ ದಾಂಡೇಲಿ ಘಟಕ ದವರು ಬೆಳಿಗ್ಗೆ 7.30ಕ್ಕೆ ಉಳವಿಯಿಂದ ಬಸ್ ಬಿಟ್ಟು ಎಲ್ಲ ವಿದ್ಯಾರ್ಥಿಗಳು ಶಾಲೆ ಕಾಲೇಜ್ ಗಳಿಗೆ ಹೋಗಲು ಅನುಕೂಲ ಕಲ್ಪಿಸಬೇಕು, ಮತ್ತು ಪುನಃ ಮನೆ ಸೇರಲು ಸಾಯಂಕಾ ಬಸ್ ಬಿಡುವ ಮೂಲಕ ಶಿಕ್ಷಣ್ಣೆ ಆಧ್ಯತೆ ನೀಡಬೇಕು. ಎಂದು ಸ್ಥಳೀಯರಾದ ಮಂಜುನಾಥ,ಕಾಲೇಕರ ಮತ್ತು ಸಂಘಡಿಗರು ವಿನಂತಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಹಣ ನೀಡುತ್ತಾರೆ. ಇಲ್ಲವೇ ಮುಂಚಿತವಾಗಿ ಹಣ ನೀಡಿ ಪಾಸ್ ಪಡೆಯುತ್ತಾರೆ. ಇಷ್ಟಾದರೂ ಇಲಾಖೆ ಬಸ್ ನೀಡದಿದ್ದರೆ ಇಲಾಖೆಯೇ ಹೊಣೆಯಾಗ ಬೇಕಾಗುತ್ತದೆ. ಕೂಡಲೇ ಬಸ್ ಆರಂಭಿಸಿ ಅನುಕೂಲ ಮಾಡಿಕೊಡಲಿ.ಎಂದು ಗ್ರಾಮದ ಹಿರಿಯರು ಆಗ್ರಹಿಸಿದ್ದಾರೆ.