ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹಾಗೂಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಶೈಕ್ಷಣಿಕ ಜಿಲ್ಲೆ ಶಿರಸಿ (ಉ.ಕ)​ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ದುಧಮಳಾ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕರಂಜೆ ಇವರ ಆಶ್ರಯದಲ್ಲಿ
​ಜಗಲಬೇಟ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2026-27 ​ದಿನಾಂಕ: 06-08-2026ರ ಗುರುವಾರ,​ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕ್ಯಾಸಲರಾಕ್ ಹಾಗೂ ಸರ್ಕಾರಿ ಪ್ರೌಢಶಾಲೆ ಕ್ಯಾಸಲರಾಕ್ ಆವರಣದ ಕ್ರೀಡಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡು,ಯಶಸ್ವಿಯಾಗಿ ಸಂಪನ್ನಗೊಂಡಿತು. ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಿಂದೋಳಿ ಶಾಲೆಯ ಮಕ್ಕಳು ಕ್ಯಾಸಲ ರಾಕ್ ನಲ್ಲಿ ನಡೆದ ಜಗಲಬೇಟ ವಲಯ ಮಟ್ಟದ ಕ್ರೀಡಾಕೂಟದದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಉತ್ತಮ ಸಾಧನೆ ಮಾಡಿರುತ್ತಾರೆ.

​ವೈಯಕ್ತಿಕ ವಿಭಾಗದಲ್ಲಿ 600 ಮೀ ಓಟದಲ್ಲಿ ಸಂಚಿತಾ ಮಿರಾಶಿ ದ್ವಿತೀಯ ಮತ್ತು ಉದ್ದಜಿಗಿತ ತೃತೀಯ,
​ನೀಲಿಶಾ ಮಿರಾಶಿ ಗುಂಡು ಎಸೆತ ದ್ವಿತೀಯ ಮತ್ತು ಚಕ್ರ ಎಸೆತ ತೃತೀಯ,
​ರಾಜಸ ಉದ್ದ ಜಿಗಿತ ತೃತೀಯ ,
​ಬಾಲಕಿಯರ ರಿಲೇ ದ್ವಿತೀಯ ಸಾಧನೆ ಮಾಡಿರುತ್ತಾರೆ.ಅದೇ ರೀತಿಯಾಗಿ
​ಬಾಲಕರ ರಿಲೇ ಪ್ರಥಮ,
​ಬಾಲಕಿಯರ ಕಬಡ್ಡಿ ಹಾಗೂ ವಾಲಿಬಾಲ್ ಪ್ರಥಮ,
​ಬಾಲಕರ ವಾಲಿಬಾಲ್ ಪ್ರಥಮ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

​ಶಾಲೆಯ ಕೀರ್ತಿಯನ್ನು ಎತ್ತರಕ್ಕೆ ತೆಗೆದುಕೊಂಡು ಹೋದ ನಮ್ಮ ಶಾಲೆಯ ಮಕ್ಕಳಿಗೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು,ಪಾಲಕರು,ಪೋಷಕರು,ಶಾಲೆಯ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಮಕ್ಕಳಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ,ಸಹ ಶಿಕ್ಷಕರಾದ ಆನಂದ ಪಿ,ವಿದ್ಯಾ ಮೇಡಂ ಹಳೆಯ ವಿದ್ಯಾರ್ಥಿಗಳು ಸಹಕಾರ,ಮಾರ್ಗದರ್ಶನ ಮಾಡಿರುತ್ತಾರೆ.