ಸುದ್ಧಿಕನ್ನಡ ವಾರ್ತೆ
ಪಣಜಿ(ಕಾಣಕೋಣ) ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಅಗಷ್ಟ 5 ರಿಂದ ಪರಮಪೂಜ್ಯ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರ 10 ನೇಯ ಚಾತುರ್ಮಾಸ್ಯ ವೃತಾಚರಣೆ ಆರ0ಭಗೊಂಡಿದೆ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಮಹತ್ವದ ವಾರ್ಷಿಕ ಧಾರ್ಮಿಕ ಆಚರಣೆಗಳಲ್ಲೊಂದಾದ ಈ ಉತ್ಸವಕ್ಕೆ ದೇಶಾದ್ಯಂತ ಇರುವ ಭಕ್ತರು ಆಗಮಿಸುತ್ತಿದ್ದಾರೆ.

ಶ್ರೀಮಠದ ಪೀಠಾಧಿಪತಿಗಳಾದ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ರವರು ಈ ಪವಿತ್ರ ವ್ರತವನ್ನು ಆಚರಿಸುತ್ತಿರುವುದು 10 ನೇಯ ವರ್ಷ, ಈ ವರ್ಷ ಪರ್ತಗಾಳಿ ಕೇಂದ್ರ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ನಡೆಯುತ್ತಿದೆ. ಶ್ರೀಗಳ ಚಾತುರ್ಮಾಸ್ಯ ವೃತವು ಕೇಂದ್ರ ಮಠದಲ್ಲಿ 4 ನೇಯ ಬಾರಿಯಾಗಿದೆ. ಶ್ರೀಗಳು ಈ ಮೊದಲು ಹುಬ್ಬಳ್ಳಿ, ಬದರೀನಾಥ, ಕುಮಟಾ, ಪನ್ವೇಲ್, ಬೆಂಗಳೂರು, ವಾರಣಾಸಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿದ್ದಾರೆ.

ಕಳೆದ ವರ್ಷ ಗೋವಾದ ಕಾಣಕೋಣದ ಶ್ರೀಮಠದ 550 ನೇಯ ವರ್ಧಂತಿ ಉತ್ಸವ ಭವ್ಯ ಆಚರಣೆಯ ನಂತರ ನಡೆಯುತ್ತಿರುವ ಮೊದಲ ಚಾತುರ್ಮಾಸ್ಯ ವೃತ ಇದಾಗಿದೆ. ದಕ್ಷಿಣ ಅಯೋಧ್ಯೆ ಎಂದೇ ಪೂಜಿಸಲ್ಪಡುವ ಶ್ರೀ ಪರ್ತಗಾಳಿ ಕೇಂದ್ರ ಮಠವು 370 ವರ್ಷಗಳ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ. ಶ್ರೀಮಠವು ಪವಿತ್ರ ಗುರು ವೃಂದಾವನಗಳು, ಶ್ರೀರಾಮ, ಸೀತಾದೇವಿ, ಲಕ್ಷ್ಮಣ, ಹನುಮಾನ ದೇವಾಲಯಗಳನ್ನು ಒಳಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಪರ್ತಗಾಳಿ ಮಠದಲ್ಲಿ 77 ಅಡಿ ಎತ್ತರದ ಶ್ರೀರಾಮಚಂದ್ರರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಇದು ಗೋವಾದ ಪ್ರಮುಖ ಆಧ್ಯಾತಿಕ ಮತ್ತು ಸಾಂಸ್ಕøತಿಕ ಹೆಗ್ಗುರುತುಗಳಲ್ಲೊಂದಾಗಿದೆ.