ಸುದ್ದಿ ಕನ್ನಡ ವಾರ್ತೆ

ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರು ಹಾಗೂ ರಾಜ್ಯದ ಗೌರವಾನ್ವಿತ ಸಚಿವರುಗಳ ಸಮ್ಮುಖದಲ್ಲಿ, ಕರ್ನಾಟಕದ ಎಲ್ಲಾ ಸಂಸದರೊಂದಿಗೆ ರಾಜ್ಯದ ಅಭಿವೃದ್ಧಿಯ ಕುರಿತು ಆಯೋಜಿಸಲಾಗಿದ್ದ ಪ್ರಮುಖ ಸಭೆಯಲ್ಲಿ ಸಂಸದ ಕಾಗೇರಿ ಅವರು ಭಾಗವಹಿಸಿ ಚರ್ಚಿಸಿದ್ದಾರೆ .

​ಈ ಸಭೆಯಲ್ಲಿ, ನಮ್ಮ ಉತ್ತರ ಕನ್ನಡ ಜಿಲ್ಲೆಯ “ಧಾರಣ ಶಕ್ತಿ”ಯ (Carrying Capacity) ಸಮಗ್ರ ಅಧ್ಯಯನ ಮೊದಲು ಆಗಬೇಕು, ತದನಂತರವೇ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ಪ್ರಸ್ತಾಪಿತ ಯೋಜನೆಗಳ ಕುರಿತು ಚರ್ಚೆ ನಡೆಸಬೇಕೆಂದು ಕಾಗೇರಿ ಅವರು ಪ್ರಬಲವಾಗಿ ಆಗ್ರಹಿಸಿದ್ದಾರೆ .

​ಇದರ ಜೊತೆಗೆ ಅಂಕೋಲಾ ವಿಮಾನ ನಿಲ್ದಾಣ ಯೋಜನೆ, ಕೊಂಕಣ ರೈಲ್ವೆ, ಬಿ.ಎಸ್.ಎನ್.ಎಲ್ ಹಾಗೂ ರಾಷ್ಟ್ರೀಯ ಹೆದ್ದಾರಿ (NHAI) ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಲಭಿಸಬೇಕಾದ ಪೂರ್ಣ ಸಹಕಾರದ ಕುರಿತು ಸಭೆಯ ಗಮನ ಸೆಳೆದು, ಅದೇ ರೀತಿ ಜಿಲ್ಲೆಯಲ್ಲಿ ಆವರಿಸಿರುವ ಬರದ ಪರಿಸ್ಥಿತಿಯಿಂದಾಗಿ ಸಂಕಷ್ಟದಲ್ಲಿರುವ ನಮ್ಮ ಜನರ ತುರ್ತು ಅಗತ್ಯಗಳನ್ನು ಪೂರೈಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ .

​ಈ ಪ್ರಮುಖ ಸಭೆಯಲ್ಲಿ ಕೇಂದ್ರ ಸಚಿವರುಗಳಾದ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯದ ಗೌರವಾನ್ವಿತ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಉಪಸ್ಥಿತರಿದ್ದರು.ಎಂದು
ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು ಉತ್ತರ ಕನ್ನಡ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.