ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನಲ್ಲಿ ಬಿರುಗಾಳಿಗೆ ವಿದ್ಯುತ್ ಇಲಾಖೆಗೆ ತುಂಬಾ ಹಾನಿಯಾಗಿದೆ, ಎಲ್ಲೆಂದರಲ್ಲಿ ಬೀಳುವ ಮರ ಮಟ್ಟು ಗಳಿಂದಾಗಿ ಹಲವಾರು ವಿದ್ಯುತ್ ಕಂಬ ಗಳು ಮುರಿದಿದ್ದು ಜೋಯಿಡಾ ದಲ್ಲಿಯೇ ಎರಡು ದಿವಸದಲ್ಲಿ 20 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ, ಭಾರಿ ಬಿರುಗಾಳಿ ಮಳೆಗೆ ಯಾವ ಕೆಲಸವೂ ನಡೆಯದ ಸ್ಥಿತಿ ನಿರ್ಮಾಣ ವಾಗಿದೆ,

 

ವಿದ್ಯುತ್ ಕಂಬ ನಿಲ್ಲಿಸಲೂ ಬಿಡದೇ ಮಳೆ ಬೀಳುತ್ತಿದೆ. ಮನೆಯಿಂದ ಹೊರಗೆ ಬರಲಾರದೇ ಜನರು ಒದ್ದಾಡುವಂತೆ ಆಗಿದೆ. ಅತಿಯಾದ ಮಳೆ ಗಾಳಿಗೆ ಸೊರದೇ ಇರುವ ಮನೆ ಕೂಡ ಸೋರುವಂತಾಗಿದೆ. ದನ ಕರುಗಳು ಮೇಯಲುಬಿಟ್ಟರೂಮೇಯಲಾರದೇ ಬಾಲ ಮುದುರಿಕೊಂಡು ಗಡ ಗಡ ನಡುಗುತ್ತಿವೆ. ಇಂತ ಸ್ಥಿತಿಯಲ್ಲಿ ಹೆಸ್ಕಾಮ್ ನವರು ನಿದ್ದೆ ಬಿಟ್ಟು ಜನರಿಗೆ ವಿದ್ಯುತ್ ನೀಡಲು ಹರಸಾಹಸ ಮಾಡುತ್ತಿದ್ದಾರೆ, . . ಒಂದುಕಡೆ ಕೆಲಸ ಮುಗಿಸಿ ಬರುವ ಮೊದಲೇ ಇನ್ನೊಂದು ಕಡೆ ಬಿರುಗಾಳಿಗೆ ಸರಿಪಡಿಸಿದ ಲೈನ್ ಗಳು ಬಿದ್ದ ಮರಗಳಿಂದ ಹಾನಿಗೆ ಬರುತ್ತಿರುವ ಕಾರಣ, ಏನೂ ಮಾಡಲು ತೋರದ ಸ್ಥಿತಿ ನಿರ್ಮಾಣ ವಾಗಿವೆ,ವಿದ್ಯುತ್ ಚಾರ್ಜ್ ಮಾಡಿದ ಉಪಕರಣ ಗಳು ಕಳೆದ ನಾಲ್ಕು ದಿನಗಳಿಂದ ಉಪಯೋಗಿಸಿ ಕಾಲಿ ಆಗುತ್ತಿವೆ. ಜನರೇಟರ್ ಬಳಸಿ ಕೆಲವರು, ಉಳ್ಳವರು, ಬೆಳಕಿನಲ್ಲಿ ಇದ್ದರೂ ಜನಸಾಮಾನ್ಯರಿಗೆ ಚಿಮಣಿಯೇ ಗತಿಯಾಗಿದೆ. ಚಿಮಣಿ ಬೆಳಗಲೂ ಕೂಡ ಚಿಮಣಿ ಎಣ್ಣೆ ಪೂರೈಕೆ ಇಲ್ಲದ ಕಾರಣ ಮೇಣದ ಬತ್ತಿಯತ್ತ ಜನ ಯೋಚಿಸುವ ಮೊದಲೇ ವಿದ್ಯುತ್ ಬೆಳಕು ಬರಲಿ ಎನ್ನುತ್ತಿದ್ದಾರೆ. ಮಳೆ ಬಂದರೆ ಬರಲಿ ಆದರೆ ಗಾಳಿ ನಿಲ್ಲಲಿ, ಎನ್ನುವ ಜನ ಜಗತ್ತಿಗೆ ಬೆಳಕು ಕೊಟ್ಟರೂ ನಮ್ಮ ತಾಲೂಕಿಗೆ ಬೆಳಕಿಲ್ಲ ಎನ್ನುವುದು ಜೋಯಿಡಾ ಬಿಟ್ಟರೆ ಇನ್ನೆಲ್ಲೂ ಇಲ್ಲದ ಕಾರಣ ನಮಗೆ ಶಾಶ್ವತವಾಗಿ ವಿದ್ಯುತ್ ಇರುವ ವ್ಯವಸ್ಥೆ ಮಾಡಲು ಸರಕಾರ ಯೋಚಿಸಲಿ ಎನ್ನುತ್ತಿದ್ದಾರೆ.