ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ : ತಾಲೂಕಿನ ಕೊಂಡೆಮನೆ ಶಾಲೆಯ ಆವರಣದಲ್ಲಿ ಅಪರೂಪದ ಬಿಳಿ ಕಾಗೆಯೊಂದು ಕಂಡು ಬಂದು, ಅಚ್ಚರಿ ಮೂಡಿಸಿದೆ.
ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲೇ ಕಾಣಿಸಿಕೊಳ್ಳುವ ಕಾಗೆಯೊಂದು ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಮಕ್ಕಳಲ್ಲಿ ಕುತೂಹಲ ಮೂಡಿಸಿತು. ಈ ಅಪರೂಪದ ಬಿಳಿ ಕಾಗೆಯನ್ನು ಶಿಕ್ಷಕರು ತಮ್ಮಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೂ ಒಮ್ಮೆ ಈ ಕಾಗೆ ಕಾಣಿಸಿಕೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
ಮಾಹಿತಿಗಳ ಪ್ರಕಾರ ಈ ರೀತಿಯ ಬಿಳಿ ಕಾಗೆಗಳು “ಅಲ್ಟಿನಿಸಂ” ಅಥವಾ “ಲ್ಯೂಸಿಸಂ” ಎಂಬ ಅಪರೂಪದ ಜೆನೆಟಿಕಲ್ ವೈಶಿಷ್ಟ್ಯಗಳಿಂದ ಉಂಟಾಗುತ್ತವೆ. ಇವುಗಳ ದೇಹದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯ ಕಡಿಮೆ ಅಥವಾ ಸಂಪೂರ್ಣವಾಗಿ ಇಲ್ಲದಿರುವುದರಿಂದ ಕಾಗೆಯ ಪುಕ್ಕಗಳು ಬಿಳಿ ಬಣ್ಣದಲ್ಲಿ ಕಾಣಿಸುತ್ತವೆ.
