ಸುದ್ದಿ ಕನ್ನಡ ವಾರ್ತೆ
ಹಳಿಯಾಳ :ಪಟ್ಟಣದ ಕೆಎಲ್ಎಸ್ – ವಿಡಿಐಟಿ ಮಹಾವಿದ್ಯಾಲಯಕ್ಕೆ ಪರಿಸರ ಸ್ನೇಹಿ, ಹಸಿರು ಶಕ್ತಿ, ಜಲಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದಕ್ಕೆ ಪ್ಲಾಟಿನಂ ಸುಸ್ಥಿರ ಕ್ಯಾಂಪಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಿಸರ್ಚ್ ಹೈಟ್ ಫೌಂಡೇಶನ್ (ಆರ್ ಹೆಚ್ ಎಫ್) ಮತ್ತು ಪರಿಸರಸಂರಕ್ಷಣಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಇಪಿಟಿಆರ್‌ಐ) ಜೂನ್ ಒಂದರಂದು ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಹಾವಿದ್ಯಾಲಯದ ಪರವಾಗಿ ಪ್ರೊ. ರಾಕೇಶ್ ಪಾಟೀಲ್ ಈ ಪುರಸ್ಕಾರವನ್ನು ಸ್ವೀಕರಿಸಿದರು.

ಭಾರತ ಸಸ್ಪೆನೇಬಲ್‌ ಕ್ಯಾಂಪಸ್ ಮಿಷನ್ 2026 ಅಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಹಾವಿದ್ಯಾಲಯವು ಪರಿಸರ ಸಂರಕ್ಷಣೆಗೆ ಕೈಗೊಂಡಿರುವ ಉಪಕ್ರಮಗಳಾದ ವನಮಹೋತ್ಸವ, ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್, ತ್ಯಾಜ್ಯ ನಿರ್ವಹಣೆ, ಹಸಿರು ಪರಿಸರ ನಿರ್ಮಾಣ, ಮಳೆ ಕೊಯ್ದು ಮುಂತಾದವುಗಳನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗಿದೆ.
ವಿವಿಧ ರಾಜ್ಯಗಳ 321 ಕಾಲೇಜು ಗಳಿಗೆ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕ ದಿಂದ ಪ್ರಶಸ್ತಿ ಪಡೆದ 28 ಕಾಲೇಜುಗಳಲ್ಲಿ ಕೇವಲ 14 ಕಾಲೇಜುಗಳು 7 ಕ್ಕೂ ಅಧಿಕ ಚಟುವಟಿಕೆ ಹಮ್ಮಿಕೊಂಡಿದ್ದು ಇದರಲ್ಲಿ ವಿಡಿಐಟಿ ಒಂದಾಗಿದೆ.

ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಪುರಸ್ಕಾರ ದೊರೆತಿರುವುದಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಕುಲಕರ್ಣಿ ಮತ್ತು ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದಾರೆ.
ಶಕ್ತಿ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತಾಗಿ ಇಕೋ ಕ್ಲಬ್‌ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಇದರ ಫಲವಾಗಿ ಮಹಾವಿದ್ಯಾಲಯ ಪುರಸ್ಕಾರಕ್ಕೆ ಭಾಜನವಾಗಿರುವುದು ಹರ್ಷ ತಂದಿದೆ ಎಂದು ಇಕೋ ಕ್ಲಬ್‌ ಸದಸ್ಯರಾದ ಡಾ ಸ್ನೇಹಾ ಕುಲಕರ್ಣಿ, ಪ್ರೊ ರೋಹಿಣಿ ಕಲ್ಲೂರ್, ಪ್ರೊ ಸುನೀತಾ ಕಲ್ಲು, ಪ್ರೊ ನವೀನ ಹಿರೇಮಠ, ಪ್ರೊ ಅಮರನಾಥ ಸ್ವಾಮಿ, ಜಿ ಎಸ್ ಯಳ್ಳೂರ ತಿಳಿಸಿದ್ದಾರೆ.