ಸುದ್ದಿ ಕನ್ನಡ ವಾರ್ತೆ
ಅಂಕೋಲಾ : ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಐಪಿಎಲ್ನ 19ನೇ ಆವೃತ್ತಿಯ ಪೈನಲ್ ಪಂದ್ಯದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಸತತವಾಗಿ ಎರಡನೇ ಬಾರಿ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿದೆ.
ಆರ್ ಸಿಬಿ ತಂಡವು ವಿಶ್ವಾದಾದ್ಯಂತ ತನ್ನ ಅಭಿಮಾನಿಗಳನ್ನು ಹೊಂದಿದೆ. ಪಂದ್ಯಾಟದ ನಂತರ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಆದರೆ ಅಂಕೋಲೆಯಲ್ಲಿಯ ಆರ್ ಸಿಬಿ ಅಭಿಮಾನಿಗಳು ಕೊಂಚ ವಿಭಿನ್ನ ರೀತಿಯಲ್ಲಿ ಪಟಾಕಿ ಸಿಡಿಸದೇ ಪಟ್ಟಣದ ಅಜ್ಜಿಕಟ್ಟೆಯಲ್ಲಿರುವ ವೃದ್ದಾಶ್ರಮದಲ್ಲಿರುವ ನಿವಾಸಿಗಳಿಗೆ ಸಿಹಿ ಹಂಚಿ ಒಪ್ಪತ್ತಿನ ಊಟ ಉಣಬಡಿಸಿ ಗೆಲುವನ್ನು ಸಂಭ್ರಮಿಸಿದರು.
ಈ ಗೆಲುವಿನ ಸಂಭ್ರಮಾಚಾರಣೆಯಲ್ಲಿ ಆರ್.ಸಿ.ಬಿ. ಅಭಿಮಾನಿಗಳಾದ ಮಂಜುನಾಥ ಹರಿಕಂತ್ರ, ಹೇಮಂತಕುಮಾರ, ಕೀರ್ತಿರಾಜ ನಾಯ್ಕ, ಮಂಜುನಾಥ ವಿ. ನಾಯ್ಕ, ಗಣೇಶ ನಾಯ್ಕ, ಡಾ. ಕರುಣಾಕರ ನಾಯ್ಕ, ಯುವಾನ ನಾಯ್ಕ, ಶ್ರೀನಿವಾಸ ಯು.ಕೆ, ಬಾಪುಗೌಡ ಬಿರಾದಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
