ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದ ಕುಣುಬಿ ಭವನ ದಲ್ಲಿ ನಾಳೆ ನಡೆಯುವ ಈ ವರ್ಷದ ಹಲಸಿನ ಮೇಳದ ಸಕಲ ಸಿದ್ಧತೆ ಆಗಿದೆ ಈ ಮೇಳದಲ್ಲಿ ಹಲಸಿನ ಕಾಯಿಯ ವಿವಿಧ ಬಗೆಯ ಹಪ್ಪಳ, ಸಂಡಿಗೆ ತಿಂಡಿ, ಚಿಪ್ಸ್ ಗಳು, ಹಲಸಿನ ಹಣ್ಣಿನ ಜ್ಯೂಸ್, ದೋಸೆ ಕಡುಬು,ಮುಳಕ, ಸಿಹಿ ವಡೆ ಸೇರಿದಂತೆ ಹಲವು ಬಗೆಯ ಪದಾರ್ಥ ಗಳನ್ನು ನೋಡಿ ಖರೀದಿಸಬಹುದು ಮೇಳದಲ್ಲಿ ಭಾಗವಹಿಸಿ ಆನಂದಿಸುವ ಸುವರ್ಣ ಅವಕಾಶ. ಬಂದಿದೆ.
ತೋಟಗಾರಿಕಾ ಇಲಾಖೆ ಜೋಯಿಡಾ, ತಾಲೂಕಾಆಡಳಿತಜೋಯಿಡಾ, .ಸ್ಕೊಡ್ ವೇಸ್ ಸ್ಸಂಸ್ಥೆ ಶಿರಸಿ ಕೆನರಾ ಬ್ಯಾಂಕ್,ದೇಶಪಾಂಡೆ ಆರ್ ಸೇಟಿ ಜೋಯಿಡಾ, ಪ್ರೇರಣಾ ಸಂಸ್ಥೆ ಗುಂದ ಸಂಜೀವಿನಿ ಒಕ್ಕೂಟ ಜೋಯಿಡಾ, ಕಾಳಿ ರೈತ ಉತ್ಪಾದಕರ ಒಕ್ಕೂಟ ಕುಂಬಾರವಾಡ, ಗ್ರೀನ್ ಏಕರ್ಸ್, ಸಹಕಾರಿ ಸಂಘ ಜೋಯಿಡಾ, ಕೃಷಿ ಇಲಾಖೆ ಜೋಯಿಡಾ ಹೀಗೆ ವಿವಿಧ ಒಕ್ಕೂಟ ಗಳ ಅಶ್ರಯದಲ್ಲಿ ಹಲಸಿನ ಮೇಳ ನಡೆಯಲಿದೆ.. ನಾಳೆ ಬೆಳಿಗ್ಗೆ 10 30 ಘಂಟೆಗೆ ಮೇಳದ ಉದ್ಘಾಟನೆ ನಡೆಯಲಿದೆ.
ಕಾರ್ಯಕ್ರಮ ದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ,ಜೊತೆಗೆ ತಹಸೀಲ್ದಾರ್ ಮಂಜುನಾಥ್ ಮುನ್ನೊಳ್ಳಿ, ತಾಲೂಕಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎನ್ ಭಾರತಿ, ಹಿರಿಯ ತೋಟಗಾರಿಕಾ ಅಧಿಕಾರಿ ರಮೇಶ ತುರಮುರಿ ಇವರು ಸರ್ವರನ್ನೂ ಪ್ರೀತಿಯಿಂದ ಆಹ್ವಾನಿಸಿದ್ದಾರೆ.ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ ಹಲಸಿನ ಮೇಳದಲ್ಲಿ ಭಾಗವಹಿಸಿ,
