ಸುದ್ದಿ ಕನ್ನಡ ವಾರ್ತೆ

ನಿನ್ನೆ ಬೆಳಿಗ್ಗೆ ಜೋಯಿಡಾ ತಾಲೂಕಿನ ಅವೆಡಾ ಗ್ರಾಮ ಪಂಚಾಯಿತಿಯ ಇಳವಾದಲ್ಲಿ ಅನ್ಯಕೋಮಿನ ಜನರು ತಮ್ಮ ಮನೆಯ ಒಳಗೆ ಕಸಾಯಿಖಾನೆಯನ್ನು ಶುರುಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಇದು ಸಮಸ್ತ ಹಿಂದೂ ಬಾಂಧವರ
ಭಾವನೆಗೆ ಬರೇ ಎಳದಂತಾಗಿದೆ, ಹಾಗೆ ಇನ್ನೊಂದು ಮುಜುಗರ ಪಡುವ ವಿಷಯವೇನೆಂದರೆ ಅನಾದಿ ಕಾಲದಿಂದಲೂ ನಾವು ಆರಾಧಿಸುವ ಕಾಳೇಶ್ವರ ದೇವಸ್ಥಾನ ದಿಂದ ಆ ಕಸಾಯಿಖಾನೆಗೆ 50ಹೆಜ್ಜೆಯ ದೂರವು ಇಲ್ಲಾ…ಹಾಗೆ ಸುತ್ತಮುತ್ತಲಿನ ಸ್ಥಳೀಯರು ಕೊಟ್ಟ ಮಾಹಿತಿಯ ಪ್ರಕಾರ ಗೋ ಕಳೆಬರಹ ( ಉಳಿದ ಮಾಂಸ, ಕರಳು ಹಾಗೂ ಎಲಬು ) ಗಳನ್ನು ಕಾಳಿ ನದಿಗೆ ಎಸೆಯುತ್ತಿದ್ದಾರೆ ಎಂದುತಿಳಿದು ಬಂದಿದೆ
ಕಾಳಿ ನದಿ ಪವಿತ್ರ ನದಿಯಾಗಿದ್ದು ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಮೂಲವಾಗಿದೆ,

ಈ ನದಿ ನೀರು ಹಲವಾರು ಪವಿತ್ರ ದೇವಸ್ಥಾನಗಳಲ್ಲಿ ಉಪಯೋಗಿಸುವಂತಹ ನದಿಯ ನೀರಾಗಿದೆ, ಹೀಗಿರುವಾಗ ಇಲ್ಲಿ ನಡೆದಿರುವಂತ ದುಷ್ಕೃತ್ಯದ ಬಗ್ಗೆ ವಿರೋಧಿಸುವಂಥದ್ದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿರುತ್ತದೆ..

ಆದಕಾರಣ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿದಂತ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಇಂದು ಮಧ್ಯಾಹ್ನ 3:00ಗಂಟೆಗೆ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ನೀಡಲಿದ್ದು ಸಮಸ್ತ ಹಿಂದುಗಳು ಪಾಲ್ಗೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ…..ಎಂದು ತಾಲೂಕಿನ ಗೋ ರಕ್ಷಕ ದಳ ದವರು ಕರೆ ನೀಡಿದ್ದಾರೆ.