ಸುದ್ದಿ ಕನ್ನಡ ವಾರ್ತೆ
ಕಾರವಾರ: ದೇಶದ ಬಹುತೇಕ ಭಾಗಗಳು ತೀವ್ರ ಬಿಸಿಲಿನ ತಾಪಕ್ಕೆ ತತ್ತರಿಸುತ್ತಿರುವ ನಡುವೆಯೇ, ಭಾರತೀಯ ಹವಾಮಾನ ಇಲಾಖೆ ಈ ಬಾರಿಯ ನೈಋತ್ಯ ಮುಂಗಾರು ಕುರಿತು ಆತಂಕಕಾರಿ ಮುನ್ಸೂಚನೆ ಸೆಪ್ಟೆಂಬರ್‌ವರೆಗಿನ ನೀಡಿದೆ.
ಜೂನ್‌ನಿಂದ ಮುಂಗಾರು ಮಳೆಯ ವಾಡಿಕೆಯ ಪ್ರಮಾಣ ಈ ಬಾರಿ ಶೇ. 92ರಿಂದ ಶೇ. 90ಕ್ಕೆ ಇಳಿಕೆಯಾಗಲಿದೆ. ಇದರಿಂದ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ದೇಶದ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ವಾಯುವ್ಯ ಭಾರತ, ಮಧ್ಯ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಕೃಷಿ ಅವಲಂಬಿತ ಪ್ರದೇಶಗಳಲ್ಲೂ ಮಳೆ ಕೊರತೆ ಉಂಟಾಗುವ ಭೀತಿ ಎದುರಾಗಿದೆ. ಜೂನ್ ತಿಂಗಳ ಮಳೆಯೂ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ತೀವ್ರ ಶಾಖದ అభి ಹಾಗೂ ಬೆಚ್ಚಗಿನ ರಾತ್ರಿಗಳು ಮುಂದುವರಿಯಲಿವೆ ಎಂದು ಇಲಾಖೆ ಎಚ್ಚರಿಸಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಕೃಷಿ ಭೂಮಿ ಮುಂಗಾರು ಮಳೆಯನ್ನೇ ಅವಲಂಬಿಸಿರುವುದರಿಂದ, ಈ ಮುನ್ಸೂಚನೆ ಕೃಷಿ ಹಾಗೂ ಆರ್ಥಿಕ ವಲಯದಲ್ಲಿ ಆತಂಕ ಮೂಡಿಸಿದೆ.
ಮುಂಗಾರು ವಿಳಂಬ: ಅಲ್ಲದೇ ಕೇರಳಕ್ಕೆ ಮುಂಗಾರು ಪ್ರವೇಶ ಮೇ 29ಕ್ಕೆ ಆಗಲಿದೆ ಎಂದು ಹೇಳಲಾಗಿತ್ತು. ಇದೀಗ ಅದು ಕೂಡ ವಿಳಂಬವಾಗಲಿದೆ. ಮುಂದಿನ ವಾರ ಆಗಮನ ಸಾಧ್ಯತೆ ಇದೆ. ಪೆಸಿಫಿಕ್ ಮಹಾಸಾಗರದಲ್ಲಿ ‘ಎಲ್ ನಿನೋ’ ಪರಿಸ್ಥಿತಿ ರೂಪುಗೊಳ್ಳುತ್ತಿರುವುದೇ ಮಳೆ ಕೊರತೆಗೆ ಪ್ರಮುಖ ಕಾರಣವಾಗಿದೆ. ಮಾನ್ಸೂನ್ ಆರಂಭವನ್ನು ನಿರ್ಧರಿಸುವ ನಿಯತಾಂಕಗಳು ಅಗತ್ಯ ಮಾನದಂಡ ಪೂರೈಸದ ಬಹುನಿರೀಕ್ಷಿತ ನೈಋತ್ಯ ಮಾನ್ಸೂನ್ ಆಗಮನ ವಿಳಂಬವಾಗಲಿದೆ. ದೀರ್ಘಕಾಲದ ಬಿಸಿ ಮತ್ತು ಶುಷ್ಕ ಹವಾಮಾನಗಳು ಮತ್ತು ಪೂರ್ವ ಮಾನ್ಸೂನ್ ಮಳೆಯ ಮಾದರಿಯಲ್ಲಿನ ವಿರಾಮವು ಮಾನ್ಸೂನ್ ಆಗಮನದ ಮೇಲೆ ಪರಿಣಾಮ ಬೀರಿದೆ ಎಂದು ಇಲಾಖೆ ಹೇಳಿದೆ.
