ಸುದ್ದಿ ಕನ್ನಡ ವಾರ್ತೆ
ಜೋಯಿಡಾ, ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ದ ಎಂಟು ಗ್ರಾಮ ಗಳ ಸಾರ್ವಜನಿಕ ರಿಗೆ ಕೆಲವು ಕಾರಣ ಗಳಿಂದ ತುಂಬಾ ಸಮಸ್ಯೆ ಆಗಿದೆ,ಕೈಟಾ ದಲ್ಲಿ ಸೇತುವೆ ಕೆಲಸ ಪೂರ್ಣ ಗೊಂಡಿಲ್ಲ ದಿರುವುದು, ಬದಲಿ ಮಾರ್ಗದಲ್ಲಿ ಆಗುವ ತೊಂದರೆ, ನಂದಿಗದ್ದೆ ಯ ಗುಂದ ಕ್ರಾಸ್ ಸೇತುವೆ ಯ ಕಾಮಗಾರಿ ನಂತರ ಮುಂದೆ ಬಸ್ ಬಾರದೇ ಇರುವುದು, ಕಾನೇರಿ ಯಿಂದ ಉಳವಿ ಕ್ರಾಸ್ ವರೆಗಿನ ಹೊಂಡ, ಗುಂಡಿ ಮುಚ್ಚದೆ ಇರುವುದು, ನಂದಿಗದ್ದೆ, ಯರಮುಖ, ತಮ್ಮಣಿಗೆ ವರೆಗೆ ಬರುತ್ತಿದ್ದ ಬಸ್ ಬಾರದೇ ಇರುವುದು, ತುಂಬಾ ಕಷ್ಟ ಕರ ವಾಗಿ ಪರಿಣಮಿಸಿದೆ,.
ಜನಸಾಮಾನ್ಯರಿಗೆ, ವಯಸ್ಸಾದವರಿಗೆ, ಆಸ್ಪತ್ರೆ ಗಳಿಗೆ ಹೋಗುವವರಿಗೆ, ವಿದ್ಯಾರ್ಥಿಗಳಿಗೆ, ಇದು ಸಹಿಸಲುಸಾಧ್ಯವಾಗುತ್ತಿಲ್ಲ, ಈ ಬಗ್ಗೆ ನಂದಿಗದ್ದೆ ಗ್ರಾಮ ಪಂಚಾಯತ ಕೂಡ ಜನತೆಗೆ ಯಾವುದೇ ಮಾಹಿತಿ ನೀಡದೇ ಕೈ ಕಟ್ಟಿ ಕುಳಿತಿದೆ ಎಂದಿದ್ದಾರೆ ಜವಾಬ್ದಾರಿ ಇರುವ ಆಡಳಿತಾಧಿಕಾರಿ ಆಗಲಿ ಅಭಿವೃದ್ದಿ ಅಧಿಕಾರಿ ಆಗಲಿ, ಕಾರ್ಯದರ್ಶಿ ಆಗಲಿ ತಮ್ಮ ಪಂಚಾಯತ್ ಗ್ರೂಪ್ ನಲ್ಲಿ ಯೂ ಕೂಡ ಮಾಹಿತಿ ನೀಡುತ್ತಿಲ್ಲ, ಇದು ಜವಾಬ್ಧಾರಿ ಅಧಿಕಾರಿಗಳು ಮಾಡುತ್ತಿರುವ ತಪ್ಪು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಕೂಡಲೇ ಮಾಹಿತಿ ನೀಡಬೇಕು, ಎನ್ನುವುದು ಜನರ ಆಶಯವಾಗಿದೆ ಮುಂದೆ ಮಳೆಗಾಲ ಬರುವ ಮೊದಲೇ ಜನ ಸಾಮಾನ್ಯರು ಬದುಕು ಕಟ್ಟಿಕೊಳ್ಳಲು ಓಡಾಟ ನಡೆಸಿ ಕೆಲಸ ಕಾರ್ಯ ಗಳನ್ನು ಮುಗಿಸಿ ಕೊಳ್ಳಬೇಕಾಗಿದೆ.
ಬಸ್ ಸಮಸ್ಯೆ ಯಿಂದ ಓಡಾಟ ಮಾಡಲು ಆಗುತ್ತಿಲ್ಲ, ಉಳ್ಳವರು ಏನಾದರೂ ಮಾಡಬಹುದು ನಾವೇನು ಮಾಡುವುದು ಬಡವರು ಎಂದು ಜನಸಾಮಾನ್ಯರು ನೋವು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಾರಿಗೆ ಇಲಾಖೆಯ ದಾಂಡೇಲಿ ಡಿಪೋ ವ್ಯವಸ್ಥಾಪಕರು, ಗ್ರಾಮ ಪಂಚಾಯತ ನಮಗೆ ಬಸ್ ಬಿಡಲು ಲಿಖಿತ ಪತ್ರ ಕೊಟ್ಟರೆ ಯಾವ ಮಾರ್ಗ ಸರಿ ಇದೆ ಎಂದು ತಿಳಿಸಿದರೆ ಬಸ್ ಬಿಡುತ್ತೇವೆ ಎನ್ನುತ್ತಾರೆ. ಆದರೆ ಈ ಕೆಲಸ ವನ್ನು ಕೂಡಲೇ ನಂದಿಗದ್ದೆ ಗ್ರಾಮ ಪಂಚಾಯತ ಮಾಡುವ ಮೂಲಕ ಜನತೆಯ ಸಮಸ್ಯೆ ಗಳಿಗೆ ಸ್ಪಂದಿಸಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು. ನಂದಿಗದ್ದೆ ಆಡಳಿತ ಅಧಿಕಾರಿ ಮಾತನಾಡಿ, ಲೋಕೋಪಯೋಗಿ ಇಲಾಖೆಗೆ ಹೇಳುತ್ತೇನೆ ಎಂದು ಕೆಳೆದ ವಾರ ಮಾಧ್ಯಮ ಕ್ಕೆ ಹೇಳಿದ್ದರು ಆದರೆ ಪ್ರಗತಿ ಏನಾಗಿದೆ ಎಂದು ಹೇಳಿಲ್ಲ,ಇದರಿಂದ ಜನತೆಗೆ ತುಂಬಾ ತೊಂದರೆ ಆಗಿದೆ.ಪ್ರತಿದಿನವೂ ಆಡಳಿತ ಅಧಿಕಾರಿ ಈ ರಸ್ತೆಯಲ್ಲಿ ಓಡಾಡಿದರೆ ಪರಿಸ್ಥಿತಿಯ ಅರಿವಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಜನರ ಸಹನೆಯ ಕಟ್ಟೆ ಒಡೆಯುವ ಮೊದಲೇ ಇದನ್ನು ತಾಲೂಕಾ ಆಡಳಿತ ಅರಿತು ಸೂಕ್ತ ಕ್ರಮ ಕೈಕೊಳ್ಳಲಿ ಎಂದು ಜನರು ಬಯಸಿದ್ದಾರೆ.ನಂದಿಗದ್ದೆ, ಯರಮುಖ, ಗುಂದ, ಶೇವಾಳಿ, ಚಿಂಚಖಂಡ ಬೆಡಸಗದ್ದೆ ಕರಿಯಾದಿ, ಅವುರ್ಲಿ ಗ್ರಾಮಸ್ಥರು ಉತ್ತಮ ರಸ್ತೆ ಸೇತುವೆ, ಬಸ್ ಸೌಕರ್ಯ ದಿಂದ ಕಳೆದ ಎರಡು ವರ್ಷ ಗಳಿಂದ ಬಳಲುತ್ತಿದ್ದಾರೆ, ಆಡಳಿತ ಇದನ್ನು ಗಮನಿಸಿ ಅಗತ್ಯ ಕ್ರಮ ಕೈಕೊಳ್ಳುವ ಭರವಸೆ ಯನ್ನು ಜನಸಾಮಾನ್ಯರಿಗೆ ನೀಡಬೇಕಾಗಿದೆ.
