ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಕರ್ನಾಟಕ ಸರ್ಕಾರ
ತೋಟಗಾರಿಕೆ ಇಲಾಖೆ, (ಉ.ಕ.) ಜೋಯಿಡಾ,ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಜೋಯಿಡಾ, ಕೃಷಿ ಇಲಾಖೆ, ಜೋಯಿಡಾ,ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ(ರಿ) ಹಳಿಯಾಳ, ಸ್ಕೋಡ್ ವೆಸ್ ಸಂಸ್ಥೆ- ಶಿರಸಿ,ಕಾಳಿ ರೈತ ಉತ್ಪಾದಕ ಸಂಸ್ಥೆ – ಕುಂಬಾರವಾಡ, ಗ್ರೀನ್ ಏಕರ್ಸ್ ಆರ್ಗ್ಯಾನಿಕ್ಸ್ ಸೌಹಾರ್ಧ ಸಹಕಾರಿ ನಿಯಮಿತ.ಪ್ರೇರಣಾ ಸಂಸ್ಥೆ – ಗುಂದ, ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಜೋಯಿಡಾ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಹಲಸು ಮೇಳ-2026 ದಿನಾಂಕ: 03-06-2026 ನೇ ಬುಧವಾರ ಬೆಳಿಗ್ಗೆ 10.30 ಗಂಟೆಗೆ ಸ್ಥಳ: ಕುಣಬಿ ಭವನ, ಜೋಯಿಡಾ (ಉ.ಕ)ದಲ್ಲಿ ನಡೆಯಲಿದೆ.
ಘನ ಉಪಸ್ಥಿತಿ.
ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ,ಸನ್ಮಾನ್ಯ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ.
ಸನ್ಮಾನ್ಯ ಶ್ರೀ ಮಂಕಾಳ ಎಸ್. ವೈದ್ಯ,ಸನ್ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಉತ್ತರ ಕನ್ನಡ ಜಿಲ್ಲೆ
ಗೌರವಾನ್ವಿತ ಉಪಸ್ಥಿತಿ.
ಸನ್ಮಾನ್ಯ ಶ್ರೀ ಸತೀಶ ಕೃಷ್ಣ ಸೈಲ್
ಸನ್ಮಾನ್ಯ ಅಧ್ಯಕ್ಷರು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್
ಮತ್ತು ಬ್ಯುಸಿನೆಸ್ ಕರ್ನಾಟಕ ಸರ್ಕಾರ ಹಾಗೂ ಶಾಸಕರು ಕಾರವಾರ ವಿಧಾನ ಸಭಾಕ್ಷೇತ್ರ.
ಉದ್ಘಾಟಕರು ಹಾಗೂ ಅಧ್ಯಕ್ಷತೆ
ಸನ್ಮಾನ್ಯ ಶ್ರೀ ಆರ್. ವಿ. ದೇಶಪಾಂಡೆಸನ್ಮಾನ್ಯ ಅಧ್ಯಕ್ಷರು, ಆಡಳಿತ ಸುಧಾರಣಾ ಆಯೋಗ ಕರ್ನಾಟಕ ಸರ್ಕಾರಬೆಂಗಳೂರು ಹಾಗೂ ಶಾಸಕರು, ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರ.
ಮುಖ್ಯ ಅತಿಥಿಗಳು.
ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಮಾನ್ಯ ಸಂಸದರು, ಉತ್ತರಕನ್ನಡ .
ಸನ್ಮಾನ್ಯ ಶ್ರೀ ಎಸ್. ವಿ. ಸಂಕನೂರ, ಮಾನ್ಯ ಶಾಸಕರು, ವಿಧಾನ ಪರಿಷತ.
ಸನ್ಮಾನ್ಯ ಶ್ರೀ ಶಾಂತಾರಾಮ ಬುಡ್ನಾ ಸಿದ್ದಿ, ಮಾನ್ಯ ಶಾಸಕರು, ವಿಧಾನ ಪರಿಷತ.
ಸನ್ಮಾನ್ಯ ಶ್ರೀ ಗಣಪತಿ ಉಳ್ವೇಕರ, ಮಾನ್ಯ ಶಾಸಕರು, ವಿಧಾನ ಪರಿಷತ.
ಮಾನ್ಯ ಶ್ರೀ ಶಿವಪ್ರಸಾದ ಗಾಂವಕರ, ಆಡಳಿತಾಧಿಕಾರಿಗಳು ತಾ.ಪಂ. ಜೋಯಿಡಾ.
ಮಾನ್ಯ ಡಾ. ಬಿ. ಪಿ. ಸತೀಶ, ತೋಟಗಾರಿಕೆ ಜಂಟಿ ನಿರ್ದೇಶಕರು (ಜಿ.ಪಂ) ಉ.ಕ. ಶಿರಸಿ.
ಮಾನ್ಯ ಶ್ರೀ ಲಕ್ಷ್ಮಣ ಎಸ್. ಕಾಂಬಳೆ, ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯತ, ಜೋಯಿಡಾ.ಜೋಯಿಡಾ: ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಈ ಬಾರಿಯ ‘ಹಲಸಿನ ಹಬ್ಬ’ಕ್ಕೆ ವೇದಿಕೆ ಸಿದ್ಧವಾಗಿದೆ. ಹಲಸಿನ ತಳಿಗಳನ್ನು ಉತ್ತೇಜಿಸಲು ಮತ್ತು ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ವಿಶಿಷ್ಟ ಮೇಳವನ್ನು ಆಯೋಜಿಸಲಾಗಿದೆ.
ಮೇಳದ ಮುಖ್ಯಾಂಶಗಳು :
ವೈವಿಧ್ಯಮಯ ತಳಿಗಳು : ಈ ಮೇಳದಲ್ಲಿ ವಿಭಿನ್ನ ರುಚಿಯ ಹಲಸಿನ ಹಣ್ಣಿನ ತಳಿಗಳ ಪ್ರದರ್ಶನ ಮಾಡಲಾಗುತ್ತಿದೆ.
ಮೌಲ್ಯವರ್ಧಿತ ಉತ್ಪನ್ನಗಳು : ಹಲಸಿನ ಹಣ್ಣಿನಿಂದ ತಯಾರಿಸಿದ ಹಪ್ಪಳ, ಸಂಡಿಗೆ,ಹಲ್ವಾ, ಚಿಪ್ಸ್,ಜ್ಯೂಸ್ ಸೇರಿದಂತೆ ಹತ್ತಾರು ಬಗೆಯ ಖಾದ್ಯಗಳು ಗ್ರಾಹಕರ ಮನ ಸೆಳೆಯಲಿವೆ.
ರೈತರಿಗೆ ಅನುಕೂಲ : ಮಧ್ಯವರ್ತಿಗಳ ಕಾಟವಿಲ್ಲದೆ ರೈತರು ತಾವು ಬೆಳೆದ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ಜೋಯಿಡಾದ ಪರಿಸರ ಪ್ರೇಮಿಗಳು ಹಾಗೂ ಕೃಷಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮೇಳವನ್ನು ಯಶಸ್ವಿಗೊಳಿಸಲು ಕೋರಿದೆ.
