ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಯರಮುಖ ರಂಗಮಂದಿರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಸಪ್ತಸ್ವರ ಸೇವಾ ಸಂಸ್ಥೆ,ಶ್ರೇಯಾ ಅಭಿವೃದ್ಧಿ ಟ್ರಸ್ಟ್‌, ಸಿದ್ದಿವಿನಾಯಕ ಮಹಿಳಾ ಯಕ್ಷಗಾನ ಮಂಡಳಿ,ಊರ ನಾಗರೀಕರ ಸಹಯೋಗದಲ್ಲಿ ಯಕ್ಷ ತಾಳಮದ್ದಳೆ ಉತ್ಸವ ನಡೆಯಿತು.

ಕಾರ್ಯಕ್ರಮವನ್ನು ಸೋಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶಂಕರ ಆಳ್ಕೆ ಉದ್ಘಾಟಿಸಿದರು.
ನಂದಿಗದ್ದಾ ಸಹಕಾರಿ ಸಂಘದ ಸಲಹೆಗಾರಾದ ಎಸ್ ಟಿ ದಾನಗೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸಪ್ತಸ್ವರ ಸಂಸ್ಥೆಯವರು ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನರಿಗೆ ಮನರಂಜನೆ ನೀಡುತ್ತಾರೆ,ಈ ಭಾಗದ ಮಕ್ಕಳಿಗೆ ಯಕ್ಷಗಾನ ಕಲೆಯ ಬಗ್ಗೆ ಉತ್ತಮ ಮಾಹಿತಿ ಜೊತೆಗೆ ರಂಗಸ್ಥಳಕ್ಕೆ ಅವಕಾಶ ನೀಡುತ್ತಿರುವುದು ಸಂತಸದ ಸಂಘತಿ ಎಂದರು.
ಡಿ.ಟಿ ಹೆಗಡೆ ತಮ್ಮಣಗಿ ಕಾರ್ಯದರ್ಶಿ ಸೋಮೇಶ್ವರ ದೇವಸ್ಥಾನ ಯರಮುಖ ಮಾತನಾಡಿ ಸಪ್ತಸ್ವರ ಸಂಸ್ಥೆ ಅಧ್ಯಕ್ಷರು ಹಾಗೂ ಎಲ್ಲ ಮಾತೆಯರು ಮಕ್ಕಳಿಗೆ ತಾಳ ಮದ್ದಳೆ ,ಯಕ್ಷಗಾನ ಕಲಿಸುವ ಮೂಲಕ ಇತಿಹಾಸವನ್ನು ಮಕ್ಕಳಿಗೆ ತಿಳಿಸುತ್ತಿದ್ದಾರೆ, ಭಾಗವತರಾದ ಅಂಕೋಲಾದ ಆನಂದು ಅಂಗೇರಾ ಹಾಗೂ ಯಕ್ಷಗಾನ ಕಲೆಯ ಪ್ರೋತ್ಸಾಹಕರಾದ ಮಂಗಲಾ ಹೆಗಡೆ ಅವರು ಮಕ್ಕಳ ತಾಳಮದ್ದಲೆಯ ಕಲಿಕೆಗೆ ಸಂಸ್ಥೆಯವರು ಉತ್ತಮವಾಗಿ ಸಹಕರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಘವೇಂದ್ರ ಭಾಗ್ವತ್ ಛಾಪಖಂಡ ಇವರು ಸಂಸ್ಥೆಗೆ ಶಾಮೀಯಾನ ಪೆಂಡಾಲ್ ದೇಣಿಗೆ ನೀಡಿದರು, ದಂಪತಿಗಳಾದ ರಾಘವೇಂದ್ರ ಹಾಗೂ ಸ್ವಾತಿ ಅವರನ್ನು ಸಪ್ತಸ್ವರ ಸಂಸ್ಥೆಯ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸವ್ವಸ್ವರ ಸಂಸ್ಥೆ ಅಧ್ಯಕ್ಷೆ ಸುಮಂಗಲಾ ದೇಸಾಯಿ ಹಾಗೂ ಸದಸ್ಯರು ಇದ್ದರು.
ಗೌರಿ ಹಾಗೂ ಪರಮೇಶ್ವರ ಸಿದ್ದಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿದ್ದರು.ನಂತರ ಮಕ್ಕಳು ಹಾಗೂ ಮಹಿಳೆಯರಿಂದ ಬೃಗು ಶಾಪ, ಸೀತಾಪರಣ, ಗಂಗಾ ಸಾರಥ್ಯ ಎಂಬ ಮೂರು ತಾಳಮದ್ದಳೆ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು. ಸಪ್ತಸ್ವರ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಲತಾ ಭಾಗ್ವತ ಕಾರ್ಯಕ್ರಮ ನಿರೂಪಿಸಿದರೆ, ಆಕಾಶವಾಣಿ ಕಲಾವಿದೆ ಗೌರಿ ಸಿದ್ದಿ ಪ್ರಾರ್ಥಿಸಿದರು.