ಸುದ್ದಿ ಕನ್ನಡ ವಾರ್ತೆ

ಇಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ವತಿಯಿಂದ ಕಾರಟೊಳ್ಳಿ ಗ್ರಾಮದಲ್ಲಿ ಕೈ – ತೋಟ ನಿರ್ಮಾಣ ತರಬೇತಿ ಹಮ್ಮಿಕೊಳ್ಳಲಾಯಿತು ಈ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಲಕ್ಷ್ಮಣ್ ಕಾಂಬಳೆ ಸಹಾಯಕ ಅಧಿಕಾರಿಗಳು ತೋಟಗಾರಿಕೆ ಅಧಿಕಾರಿಗಳು ಜೋಯಿಡಾ ಇವರು ಕೈತೋಟ ಮಾಡುವುದರಿಂದ ಒಳ್ಳೆಯ ತರಕಾರಿ ಸಿಗುತ್ತದೆ ಉತ್ತಮ ತರಕಾರಿಯನ್ನು ಬೆಳೆದು ತಿನ್ನುವುದರಿಂದ ಆರೋಗ್ಯವು ಚೆನ್ನಾಗಿರುತ್ತೆ ಮತ್ತು ದೀರ್ಘಾಯುಷ್ಯ ಬದುಕಲು ಸಹಾಯಮಾಡುತ್ತದೆ ಕೈ ತೋಟ ನಿರ್ಮಾಣದ ಪದ್ಧತಿಗಳ ಮಾಡುವ ವಿಧಾನ ತಿಳಿಸಿಕೊಟ್ಟರು ಅಲ್ಲದೆ ತರಕಾರಿಗೆ ಬರುವ ರೋಗಗಳ ಕುರಿತು ಮಾಹಿತಿ ನೀಡಿದರು ಈ ಕಾರ್ಯಕ್ರಮವನ್ನು ಅಶೋಕ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಜೋಯಿಡಾ ಆಯೋಜಿಸಿ ವಂದಿಸಿದರು ಈ ತರಬೇತಿಯಲ್ಲಿ ಹೀರಿಕಾಯಿ, ಸುರೆಕಾಯಿ, ಬೆಂಡೆಕಾಯಿ, ಬದನೆಕಾಯಿ , ಮೆಣಸಿನಕಾಯಿ ಬೀಜಗಳನ್ನು ಫಲಾನುಭಾವಿಗಳಿಗೆ ವಿತರಿಸಲಾಯಿತು ಕಾರ್ಯಕ್ರಮದ ವೇದಿಕೆ ಮೇಲೆ ವಿಟ್ಠು ಬಾ ವೆಲಿಪ್, ನಂದಾ ವೆಲಿಪ್ ಮತ್ತು ಸಂತೋಷ್ ವೆಲಿಪ್ ಉಪಸ್ಥಿತರಿದ್ದರು. ಕೊನೆಯಲ್ಲಿ ಅಂಗನವಾಡಿ ಶಿಕ್ಷಕರು ಸಹಕರಿಸಿದರು.