ಸುದ್ದಿ ಕನ್ನಡ ವಾರ್ತೆ
ಬಾಗಲಕೋಟೆ:
ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಈಗ ಇಳಕಲ್ ನಗರಕ್ಕೂ ಕಾಲಿಟ್ಟಿದೆ. ಬಹುಕಾಲದಿಂದ ಮುಚ್ಚದ ಗುಂಡಿಯೊಂದನ್ನು ಯುವಕರು ಕಾಕ್ರೋಚ್ ಚಿತ್ರ ಅಳವಡಿಸಿ ಗಮನಸೆಳೆದಿದ್ದಾರೆ.
ಇಳಕಲ್ಲಿನ ವಾರ್ಡ್ ನಂ.೭ರ ಅನ್ನಪೂರ್ಣ ಲಾಡ್ಜ್ ಬಳಿ ಇರುವ ಸರ್ವಿಸ್ ರಸ್ತೆಯಲ್ಲಿ ಹಲವು ದಿನದಿಂದ ಗುಂಡಿ ಬಿದ್ದಿದೆ ಆದರೆ ಅದನ್ನು ಮುಚ್ಚಲು ಸ್ಥಳೀಯ ನಗರಸಭೆ ಅಧಿಕಾರಿಗಳು ಮುಂದಾಗದೆ ನಿರ್ಲಕ್ಷ್ಯ ತೋರಿದ್ದರು. ಅದರಿಂದ ಬೇಸತ್ತ ಯುವಕರ ಗುಂಪವೊಂದು ಗುಂಡಿ ಮುಚ್ಚವಂತೆ ಸಾಲುಗಳ ಜತೆಗೆ ಸೂಟು ಧರಿಸಿದ್ದ ಜೀರಲೆಯ ಫೋಟೋ ಹಾಕಿದ್ದಾರೆ.
ನಿರುದ್ಯೋಗಿ ಯುವಕರ ಕುರಿತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನೀಡಿದ ಹೇಳಿಕೆ ನಂತರ ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅದೇ ಟ್ರೆಂಡ್ ಬಳಸಿ ಯುವಕರು ಗುಂಡಿಗೆ ಕಾಕ್ರೋಚ್ ಫೋಟೋ ಬಳಸಿ ಸ್ಥಳೀಯ ಪ್ರಾಧಿಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು, ಅದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ನಗರಸಭೆ ಸಿಬ್ಬಂದಿ ಗುಂಡಿ ಮುಚ್ಚಿದ್ದಾರೆ ಎಂದು ತಿಳಿದು ಬಂದಿದೆ.
