ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಹಿರಿಯ ಅಡಕೆ ವರ್ತಕ ದಿ. ಉಮೇಶ ಭಟ್ಟ ಅವರಿಗೆ ಪಟ್ಟಣದ ಅಡಕೆ ಭವನದಲ್ಲಿ ಅಡಕೆ ವ್ಯವಹಾರಸ್ಥರ ಸಂಘದಿಂದ ನುಡಿನಮನ ಸಲ್ಲಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ಉಮೇಶ ಭಟ್ಟ ಅವರು ಓಂಕಾರ ಟ್ರೇಡಿಂಗ್ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾಗಿ, ಗಾಯತ್ರಿ ಕಂಪನಿಯ ಮುಖ್ಯಸ್ಥರಾಗಿ ಗಣ್ಯ ಅಡಕೆ ವರ್ತಕರಾಗಿ ಗುರುತಿಸಿಕೊಂಡಿದ್ದರು. ಯಲ್ಲಾಪುರ, ಅಂಕೋಲಾ, ಜೊಯಿಡಾ ಭಾಗದ ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ಅಡಕೆ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಸಂಘದ ಅಧ್ಯಕ್ಷ ಅಧ್ಯಕ್ಷ ಆರ್.ವಿ. ಹೆಗಡೆ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ವರ್ತಕರಾದ ಎಸ್.ಎನ್.ಭಟ್ಟ ಏಕಾನ, ನರಸಿಂಹಮೂರ್ತಿ ಭಟ್ಟ, ಗೋಪಾಲಕೃಷ್ಣ ಗಾಂವ್ಕರ, ಟಿ.ಆರ್. ಹೆಗಡೆ, ಟಿಎಸ್ಎಸ್ ಶಾಖಾ ವ್ಯವಸ್ಥಾಪಕ ಗಣೇಶ ಹೆಗಡೆ, ಟಿಎಂಎಸ್ನ ಉಮೇಶ ಹೆಗಡೆ ಮುಂತಾದವರು ನುಡಿನಮನ ಸಲ್ಲಿಸಿದರು.
