ಸುದ್ದಿ ಕನ್ನಡ ವಾರ್ತೆ
ಬನವಾಸಿ ಮಂಡಳ ಭಾರತೀಯ ಜನತಾ ಪಕ್ಷ ಜಿಲ್ಲಾ ರೈತ ಮೋರ್ಚಾ ಉತ್ತರ ಕನ್ನಡ, ಬನವಾಸಿ ಮಂಡಲದ ವತಿಯಿಂದ ವಿದ್ಯುತ್ ಸಮಸ್ಯೆಯಿಂದ ರೈತರಿಗಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮೇ.12 ರಂದು ಬೆಳಿಗ್ಗೆ ಬನವಾಸಿಯಿಂದ ಬೈಕ್ ರ‌್ಯಾಲಿ ಹಮ್ಮಿಕೊಂಡಿದ್ದು, ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ಬೆಳಿಗ್ಗೆ 11 ಗಂಟೆಗೆ ಬೈಕ್ ರ‌್ಯಾಲಿಯು ಆಗಮಿಸಲಿದೆ. ನಂತರ ಅಲ್ಲಿಂದ ಬಸ್ಟ್ಯಾಂಡ್ ವೃತ್ತ, ಸಿಪಿ ಬಝಾರ್, ರಾಘವೇಂದ್ರ ಸರ್ಕಲ್ ಮಾರ್ಗವಾಗಿ ಹೆಸ್ಕಾಮ್ ಕಛೇರಿ ತಲುಪಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಭಯಸಲಾಗಿದೆ ಎಂದು
ಅನಂತಮೂರ್ತಿ ಹೆಗಡೆ
ಜಿಲ್ಲಾಧ್ಯಕ್ಷರು, ರೈತಮೋರ್ಚಾ ಉತ್ತರ ಕನ್ನಡ
ಮತ್ತು ರಮೇಶ ನಾಯ್ಕ ಕುಪ್ಪಳ್ಳಿ
ಅಧ್ಯಕ್ಷರು, ಭಾಜಪಾ, ಬನವಾಸಿ ಮಂಡಲಇವರು ಪ್ರಕಟಿಸಿದ್ದಾರೆ.
