Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ನಗರದ ಸಮೀಪದ ಹಬ್ಬುವಾಡಾದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇಂದು ಮೇ 12, ಮಂಗಳವಾರದಂದು ವಿಶಿಷ್ಟವಾದ ‘ಮಾವಿನ ಹಣ್ಣಿನ ಉತ್ಸವ’ವನ್ನುಹಮ್ಮಿಕೊಳ್ಳಲಾಗಿದೆ.

ಮಾವಿನ ಹಣ್ಣಿನ ಸೀಸನ್ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಇಂದು ಶ್ರೀ ಮಹಾಗಣಪತಿ ದೇವರಿಗೆ ‘ಆಮರಸದ ಅಭಿಷೇಕ’ (ಮಾವಿನ ಹಣ್ಣಿನ ರಸದಿಂದ ಅಭಿಷೇಕ) ನಡೆಯಲಿದ್ದು, ಗಣಪತಿಯ ವಿಗ್ರಹಕ್ಕೆ ಮಾವಿನ ಹಣ್ಣುಗಳಿಂದ ಆಕರ್ಷಕವಾಗಿ ಅಲಂಕಾರ ಮಾಡಲಾಗುವುದು.

Banner Ad

ಉತ್ಸವದ ಅಂಗವಾಗಿ ಬೆಳಿಗ್ಗೆ 9:30ಕ್ಕೆ ಸಾರ್ವಜನಿಕರಿಗೆ ಅಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ದೇವರಿಗೆ ವಿಶೇಷ ಅಭಿಷೇಕ, 12:45ಕ್ಕೆ ಮಹಾಪೂಜೆ ನೆರವೇರಲಿದೆ. ತದನಂತರ 1 ಗಂಟೆಗೆ ಭಕ್ತಾದಿಗಳಿಗೆ ಪ್ರಸಾದ ಹಾಗೂ ತೀರ್ಥ ವಿತರಣೆ ಇರುತ್ತದೆ. ಸಂಜೆ 7:30ಕ್ಕೆ ಪುನಃ ಮಹಾಪೂಜೆ ನಡೆಯಲಿದೆ.

ಈ ಅಪರೂಪದ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಹಬ್ಬುವಾಡ ಕಾರವಾರದ ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.

Banner Ad