ಸುದ್ದಿ ಕನ್ನಡ ವಾರ್ತೆ
ಸ್ಪರ್ಧಾತ್ಮಕ ಪರೀಕ್ಷೆಗಳ ಜಗತ್ತಿನಲ್ಲಿ ಜೆಇಇ ಮೇನ್ಸ್ ಅತ್ಯಂತ ಕಠಿಣ ಮತ್ತು ಸವಾಲಿನ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಂಡಿದ್ದರು, ಇಂತಹ ಪರೀಕ್ಷೆಯಲ್ಲಿ ಅತ್ಯುನ್ನತ ರಾಂಕ್ ಪಡೆಯುವುದು ಅಸಾಧಾರಣ ಸಾಧನೆ. ಕಳೆದ 5 ವರ್ಷಗಳಿಂದ ನಿರಂತರ ಸಾಧನೆಯ ಹಾದಿಯಲ್ಲಿ ಗೋರೆಯ ಕೆನರಾ ಎಕ್ಸಲೆನ್ಸ್ ಕಾಲೇಜು ಮುನ್ನಡೆಯುತ್ತಿದ್ದು, ಈ ವರ್ಷದ ಜೆಇ ಇ ಮೇನ್ಸ್ -2026 ರ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿನ ದಿಶಾ ಅಶೋಕ್ ಹೆಗಡೆ ಬಿ. ಆರ್ಕಿಟೆಕ್ಚರ್ ವಿಭಾಗದಲ್ಲಿ 99.20 percentile ಅಂಕ ಗಳಿಸಿ ರಾಷ್ಟ್ರ ಮಟ್ಟದ GEN-EWS ನಲ್ಲಿ 35 ನೇ ಸ್ಥಾನ ಹಾಗೂ CRL 589 ನೇ ಸ್ಥಾನ ಪಡೆದುಕೊಂಡಿರುವುದು ಉತ್ತರ ಕನ್ನಡ ಜಿಲ್ಲೆಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಇದರೊಂದಿಗೆ ಗುಣೇಶ ಶೆಟ್ಟಿ 94.12 percentile ಮತ್ತು ಅಕ್ಷಯ್ ಉಮೇಶ್ ಶಾಸ್ತ್ರಿ 92.13 percentile ಪಡೆದು ಜೆ.ಇ.ಇ. ಮೇನ್ಸ್ ನಲ್ಲಿ ಉತ್ತಮ ಸಾಧನೆಯನ್ನು ಮಾಡಿ ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿರುತ್ತಾರೆ. ಈ ಸಾಧನೆಯ ಹಿಂದೆ ವಿದ್ಯಾರ್ಥಿಗಳ ಪರಿಶ್ರಮದ ಜೊತೆಗೆ ಕಾಲೇಜಿನ ಗುಣಮಟ್ಟದ ತರಬೇತಿ ,ಸೂಕ್ತ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸುತ್ತದೆ.
ಕೆನರಾ ಎಕ್ಸಲೆನ್ಸ್ ಕಾಲೇಜು ಕೇವಲ ಪಠ್ಯಪುಸ್ತಕಗಳ ಮೇಲೆ ಮಾತ್ರ ಕೇಂದ್ರೀಕರಿಸುವುದಿಲ್ಲ. ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ಸಮಯ ನಿರ್ವಹಣೆಯನ್ನು ಬೆಳೆಸುತ್ತದೆ. ಜೆಇಇ ತರಬೇತಿಯಲ್ಲಿ ಪರಿಣಿತ ಅಧ್ಯಾಪಕರು, ನಿಯಮಿತ ಪರೀಕ್ಷೆಗಳು ,ವೈಯಕ್ತಿಕ ಮಾರ್ಗದರ್ಶನ, ಪರಿಣಾಮಕಾರಿ ಅಧ್ಯಯನ ಸಾಮಗ್ರಿಗಳು, ಮಾನಸಿಕ ಒತ್ತಡ ನಿರ್ವಹಣೆ, ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮಗಳು ಒಟ್ಟಾರೆ ‘ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣ ಪದ್ಧತಿ’ ವಿದ್ಯಾರ್ಥಿಗಳ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ .ಇಂತಹ ತರಬೇತಿಯನ್ನು ಕೆನರಾ ಎಕ್ಸಲೆನ್ಸ್ ಕಾಲೇಜು ನಿರಂತರವಾಗಿ ನೀಡುತ್ತಾ ಬಂದಿದೆ.
ದಿಶಾ ಅವರ ಈ ಸಾಧನೆ ಜಿಲ್ಲೆಯ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ, ಪರಿಶ್ರಮ, ಧೈರ್ಯ ಮತ್ತು ಸರಿಯಾದ ಮಾರ್ಗದರ್ಶನ ಇದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿರುತ್ತಾಳೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೆನರಾ ಎಕ್ಸಲೆನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಜಿ.ಜಿ ಹೆಗಡೆ, ಆಡಳಿತ ಮಂಡಳಿಯ ವಿಶ್ವಸ್ಥರಾದ ಶ್ರೀ ಡಿ. ಎನ್ ಭಟ್ಟ, ಪ್ರಾಚಾರ್ಯರಾದ ಶ್ರೀ ಕಿರಣ್ ಭಟ್ಟ ಹುತ್ಗಾರ, ಆಡಳಿತಾಧಿಕಾರಿಗಳಾದ ಶ್ರೀ ಶಶಾಂಕ ಶಾಸ್ತ್ರಿ, ತರಬೇತಿಗೊಳಿಸಿದ ಉಪನ್ಯಾಸಕ ವೃಂದ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಅಭಿನಂದಿಸಿ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
