ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ದುರ್ಗಾದೇವಿ ಕ್ರೀಡಾಂಗಣದಲ್ಲಿ ನಡೆದ ಎರಡು ದಿನಗಳ ಅಂಬರ್ಡಾ ಪ್ರೀಮಿಯರ್ ಲೀಗ್ ಅಂಡರ್-22 ವಯೋಮಿತಿಯೋಳಗಿನ ಪಂದ್ಯಾವಳಿಯು ಯಶಸ್ವಿಯಾಗಿ ಸಂಪನ್ನಗೊಂಡಿತು.

ಪಂದ್ಯಾವಳಿಯ ಅಂತಿಮ ಪೈನಲ್ ಪಂದ್ಯದಲ್ಲಿ ಆರ್ ಕೆ ವಾರಿಯರ್ಸ್ ತಂಡವು ಜೋಯಿಡಾದ ದುರ್ಗಾ-11 ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದರೆ,ಜೋಯಿಡಾದ ದುರ್ಗಾ-11 ದ್ವಿತೀಯ( ರನ್ನರ್ ಅಪ್)ಸ್ಥಾನ ಪಡೆಯಿತು. ಬಹುಮಾನ ವಿತರಣೆಯ ಸಂದರ್ಭದಲ್ಲಿ ಗಣ್ಯರು, ಸಂಘಟಕರು ಉಪಸ್ಥಿತರಿದ್ದರು.