ಸುದ್ದಿ ಕನ್ನಡ ವಾರ್ತೆ

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳು ಶ್ರೀ ಸ್ವರ್ಣವಲ್ಲಿ ಸೋಂದಾ ರವರು ಇಂದು ಯರಮುಖ ಶ್ರೀ ಸೋಮೇಶ್ವರ ದೇವಸ್ಥಾನ ಕ್ಕೆ ಭೇಟಿ ನೀಡಿ ಜನತೆಯ ಒಳಿತಿಗಾಗಿ ಶ್ರೀ ಸೋಮೇಶ್ವರ ನಲ್ಲಿ ಪ್ರಾರ್ಥಿಸಿದರು, ಶ್ರೀ ಸೋಮೇಶ್ವರ ದೇವಸ್ಥಾನ ದ ದೀಪ ಜ್ಯೋತಿ ಯನ್ನು ಬೆಳಗಿಸುವ ಮೂಲಕ ಭಕ್ತರ, ಬೇಡಿಕೆಯನ್ನು ಪೂರೈಸಿದರು, ಈ ಸಂದರ್ಭದಲ್ಲಿ ದೇವಸ್ಥಾನ ದ ಮೊಕ್ತೇಸರರು ಆಡಳಿತ ಮಂಡಳಿ ಯವರು , ವೇದಮೂರ್ತಿ ಪ್ರಸನ್ನ ಭಟ್ಟ, ವೈದಿಕ ವೃಂದ ದವರು ಗುಂದ ಸೀಮಾ ಅಧ್ಯಕ್ಷರು ಗ್ರಾಮಸ್ತರು ಇದ್ದರು, ಇದಕ್ಕೂ ಮೊದಲು ಶ್ರೀ ಶ್ರೀ ಗಳು ದಬಗಾರ ದಲ್ಲಿ ನಡೆದ ಪೂಜೆಗೆ ಹೋಗಿ ಅಲ್ಲಿ ತೀರ್ಥ ಪ್ರಸಾದ, ನೀಡಿ ಆಶೀರ್ವಚನ ಮಾಡಿ,ಫಲ ಮಂತ್ರಾಕ್ಷತೆ ನೀಡಿದರು, ಈ ವೇಳೆ ದಬಗಾರ ಮಿತ್ರ ಮಂಡಳಿ ಯವರು ವೈದಿಕ ವೃಂದ ದವರು ಇದ್ದು ಸಹಕಾರ ನೀಡಿದರು.ಭಕ್ತರ ಶ್ರೇಯೋಭಿವೃದ್ಧಿ ಗಾಗಿ ಈ ವಾರದಲ್ಲಿ ಎರಡು ಸಲ ಗುಂದ ಕ್ಕೆ ಶ್ರೀಶ್ರೀ ಗಳು ಭೇಟಿ ನೀಡಿದರು. ಇದು ಭಕ್ತ ವೃಂದಕ್ಕೆ ಅಪಾರ ಸಂತಸ ತಂದಿದೆ.