ಸುದ್ಧಿಕನ್ನಡ ವಾರ್ತೆ
ಪಣಜಿ(ಪೊಂಡಾ): ಗೋವಾದ ಪೆÇೀಂಡಾ ವಿಧಾನಸಭಾ ಉಪಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಬುಧವಾರ ಮಧ್ಯಾನ್ಹ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಗೋವಾ ಬಾಂಬೆ ಹೈಕೋರ್ಟ್ ಪೆÇಂಡಾ ಉಪಚುನಾವಣೆಯನ್ನು ರದ್ದುಗೊಳಿಸಿದೆ. ಆದ್ದರಿಂದ ಏಪ್ರಿಲ್ 9 ರಂದು ನಡೆಯಲಿರುವ ಮತದಾನ ಪ್ರಕ್ರಿಯೆ ರದ್ಧಾಗಿದೆ.
ಪೆÇಂಡಾ ಉಪಚುನಾವಣೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಪ್ರಸ್ತುತ ವಿಧಾನಸಭೆಯ ಐದು ವರ್ಷಗಳ ಅವಧಿ ಮುಗಿಯಲು ಒಂದು ವರ್ಷ ಮಾತ್ರ ªಬಾಕಿ ಇದೆ ಎಂದು ಹೇಳಿ ಪ್ರೀತಮ್ ಹರ್ಮಲ್ಕರ್ ಮತ್ತು ಅಂಕಿತಾ ಕಾಮತ್ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಚುನಾವಣಾ ಅಧಿಸೂಚನೆಯನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಈ ಆದೇಶದ ನಂತರ, ಏಪ್ರಿಲ್ 9 ರಂದು ನಡೆಯಬೇಕಿದ್ದ ಪೊಂಡಾ ಉಪಚುನಾವಣೆಯ ಮತದಾನ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಲಾಗಿದೆ. ಇದರಿಂದಾಗಿ, ನಡೆಯುತ್ತಿರುವ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಸಂಬಂಧಿತ ಅರ್ಜಿಯಲ್ಲಿ ಚುನಾವಣಾ ಅಧಿಸೂಚನೆಯ ವಿರುದ್ಧ ಆಕ್ಷೇಪಣೆಗಳನ್ನು ಎತ್ತಲಾಗಿತ್ತು. ಚುನಾವಣಾ ಆಯೋಗ ಮತ್ತು ಆಡಳಿತವು ಮುಂದಿನ ಪ್ರಕ್ರಿಯೆಯ ಕುರಿತು ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
