Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನಲ್ಲಿ ಸೇವೆ ಸಲ್ಲಿಸಿ ಸಧ್ಯ ಶಿರಸಿ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎನ್ ವೆಂಕಟೇಶ ಅವರು 2 ನೇ ಬಾರಿಗೆ ಇಂಡಿಯಾ ಪೋಲಿಸ್ ಬ್ಯಾಡ್ಮಿಂಟನ್ ಚಾಂಪಿಯಯನ್ಸ್ ಶಿಪ್ ಗೆ ಕರ್ನಾಟಕ ಪೋಲಿಸ್ ಇಲಾಕೆಯಿಂದ ಆಯ್ಕೆಯಾಗಿದ್ದಾರೆ.

ಉತ್ಸಾಹಿ ಪೋಲಿಸ್ ಆದ ವೆಂಕಟೇಶ ಅವರು ಕ್ರೀಡೆಯಲ್ಲಿ ಸದಾ ಮುಂದೆ, ಚಿಕ್ಕ ವಯಸ್ಸಿನಿಂದಲೂ ಬ್ಯಾಡ್ಮಿಂಟನ್ ನಲ್ಲಿ ಪ್ರಶಸ್ತಿ ಪಡೆಯುತ್ತಾ ಬಂದಿದ್ದಾರೆ, ಕಳೆದ ವರ್ಷವೂ ರಾಷ್ಟ್ರೀಯ ಮಟ್ಟದಲ್ಲಿ ಇವರು ಮಿಂಚಿದ್ದರು, ಈ ವರ್ಷ ಕೂಡಾ ರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

Banner Ad

5 ವರ್ಷಗಳಿಂದ ಪೋಲಿಸ್ ಇಲಾಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಲಕ್ನೋದಲ್ಲಿ ನಡೆಯುತ್ತಿರುವ ಚಾಂಪಿಯನ ಶಿಪ್ ಗೆ ಇವರು ಆಯ್ಕೆಯಾಗಿದ್ದು ,ಶಿರಸಿ ಹಾಗೂ ಜೋಯಿಡಾ ಭಾಗದ ಹಿರಿಯ ಮತ್ತು ಕಿರಿಯ ಪೋಲಿಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಎನ್ ವೆಂಕಟೇಶ ಅವರನ್ನು ಅಭಿನಂದಿಸಿದ್ದಾರೆ.

Banner Ad