ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ನುಜ್ಜಿ ಗ್ರಾಮದ ದುಧಗಾಳಿ ಯ ವಿಠಲ ರಕುಮಾಯಿ ದೇವರ ವಾರ್ಷಿಕೋತ್ಸವ ಬರುವ ದಿನಾಂಕ 30 ರಂದು ಸೋಮವಾರ ನಡೆಯಲಿದೆ.

ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ದೇವರ ವಿವಿಧ ಧಾರ್ಮಿಕ ಸೇವೆಗಳು ದಿನಾಂಕ 27ರಿಂದ ದಿನಾಂಕ 31ರ ವರೆಗೆ ನಡೆಯುತ್ತದೆ ಚೈತ್ರ ಶುದ್ಧ ಏಕಾದಸಿ ದಿನಾಂಕ 29ರಂದು ರವಿವಾರ ರಾತ್ರಿ 12 ಘಂಟೆಗೆ ಅಗ್ನಿ ಕುಂಡಕ್ಕೆ ಪೂಜೆ, ಚಾಲನೆ ದಿನಾಂಕ 30ರಂದು ಬೆಳಿಗ್ಗೆ 8ಘಂಟೆ ಯಿಂದ ಮದ್ಯಾಹ್ನ 12 ಘಂಟೆ ವರೆಗೆ ಪೂಜೆ, ಅಭಿಷೇಕ, ನೈವೇದ್ಯ, ಮಂಗಳಾರತಿ, ಪ್ರಸಾದ ವಿತರಣೆ, ನಂತರ ವನಪ್ರವೇಶ, ಅಗ್ನಿಕುಂಡ ಪ್ರವೇಶ ದೇವರ ದರ್ಶನ, ಮತ್ತು ರಾತ್ರಿ 12 ಘಂಟೆಗೆ ಮರಾಠಿ ನಾಟಕ ಮಾಯೆಚೆ ಪೂಲ, ನಡೆಯುತ್ತದೆ, 31ರಂದು ಬೆಳಿಗ್ಗೆ ಯಿಂದ ವಿವಿಧ ಸೇವೆಗಳು ನಡೆದು ಮಹಾ ಪ್ರಸಾದ ಮತ್ತು ಅನ್ನ ಸಂತರ್ಪಣೆ ನಡೆಯುತ್ತದೆ, ಎಂದು ವಿಠಲ ರಕುಮಾಯಿ ಮಂದಿರ ದುಧಗಾಳಿ ಗ್ರಾಮಸ್ತರು ತಿಳಿಸಿರುತ್ತಾರೆ.